ADVERTISEMENT

ಗದಗ- ವಿಜಯ ಶಿಂಧೆ ಪ್ರಕರಣ ಸಿಐಡಿ ಹೆಗಲಿಗೆ: ಎಸ್‌ಪಿ

ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ವಂಚನೆ– ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:18 IST
Last Updated 18 ಆಗಸ್ಟ್ 2022, 5:18 IST
ಶಿವಪ್ರಕಾಶ್ ದೇವರಾಜು
ಶಿವಪ್ರಕಾಶ್ ದೇವರಾಜು   

ಗದಗ: ‘ಜಮೀನು, ನಿವೇಶನದ ಆಮಿಷ ಒಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ, ವಂಚನೆ ಮಾಡಿದ್ದ ಪುಟ್ಟರಾಜ ಫೈನಾನ್ಸ್‌ ಕಾರ್ಪೊರೇಷನ್‌ ಮಾಲೀಕ ವಿಜಯ ರಾಘವೇಂದ್ರ ಶಿಂಧೆ ಪ್ರಕರಣವನ್ನು ಇನ್ನು ಮುಂದೆ ಸಿಐಡಿ ತಂಡ ತನಿಖೆ ನಡೆಸಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,‘ಕೋಟ್ಯಂತರರೂಪಾಯಿಅವ್ಯವಹಾರನಡೆದಿದ್ದರಿಂದಬಡ್ಸ್‌ಕಾಯ್ದೆಯಡಿಪ್ರಕರಣ
ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಆದರೆ, ಪ್ರಕರಣದ ಆಳ ಮತ್ತು ವಿಸ್ತಾರ ದೊಡ್ಡದಾಗಿದ್ದರಿಂದ ಇದನ್ನು ಸಿಐಡಿ ತನಿಖೆಗೆ ವಹಿಸುವಂತೆ ಆ.2ರಂದು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಆ.10ರಂದು ಪ್ರಕರಣವನ್ನು ಸಿಐಡಿಗೆ ವಹಿಸಿರುವ ಆದೇಶ ಹೊರಡಿಸಿದ್ದಾರೆ. ಸಿಐಡಿ ತಂಡ ಶೀಘ್ರದಲ್ಲೇ ಜಿಲ್ಲೆಗೆ ಬರಲಿದೆ’ ಎಂದು ಅವರು ಮಾಹಿತಿ ನೀಡಿದರು.

ಪುಟ್ಟರಾಜ ಫೈನಾನ್ಸ್ ಕಾರ್ಪೊರೇಷನ್ ವಿರುದ್ಧ ನಗರದ ಕಳಸಾಪುರ ರಸ್ತೆ ನಿವಾಸಿ ಸಂತೋಷ ಪ್ರಭಾಕರ ಮುಟಗಾರ ಜೂ.3ರಂದು ದೂರು ನೀಡಿದ್ದರು. ವಂಚನೆ ಆರೋಪದ ಮೇಲೆ ಪೊಲೀಸರು ಜುಲೈ 17ರಂದು ವಿಜಯ ಶಿಂಧೆಯನ್ನು ಬಂಧಿಸಿದ್ದರು.

ADVERTISEMENT

₹ 10 ಕೋಟಿಗಿಂತ ಹೆಚ್ಚು ಹಣದ ಅವ್ಯವಹಾರ ಕಂಡು ಬಂದಿದ್ದರಿಂದ ಪ್ರಕರಣವನ್ನು ಕಲಂ 21 ಬಡ್ಸ್ ಕಾಯ್ದೆ (ಬ್ಯಾನಿಂಗ್ ಆಫ್ ಅನ್ ರೆಗ್ಯುಲೇಡೆಟ್ ಡೆಪಾಸಿಟ್ ಸ್ಕೀಂ ಆ್ಯಕ್ಟ್ 2019 ) ಅಡಿಯಲ್ಲಿ ತನಿಖೆ ನಡೆಸಲಾಗಿತ್ತು ಎಂದು ಅವರು ಹೇಳಿದರು.

ವಿಜಯ ಶಿಂಧೆಯಿಂದ ಸರ್ಕಾರಿ ಮೌಲ್ಯದ ಪ್ರಕಾರ ಅಂದಾಜು ₹5.50 ಕೋಟಿಯ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಆಸ್ತಿಯ ಮಾರುಕಟ್ಟೆಯ ಬೆಲೆ ಸದ್ಯಕ್ಕೆ ₹35 ಕೋಟಿ ಆಗಲಿದೆಶಿವಪ್ರಕಾಶ್‌ ದೇವರಾಜು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.