ADVERTISEMENT

ವಿಕ್ರಮ ವಿಸಾಜಿ ಕೃತಿಗೆ ‘ಡಾ. ಗಿರಡ್ಡಿ ಪ್ರತಿಷ್ಠಾನ’ದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 18:15 IST
Last Updated 10 ಸೆಪ್ಟೆಂಬರ್ 2022, 18:15 IST
ಡಾ.ವಿಕ್ರಮ ವಿಸಾಜಿ
ಡಾ.ವಿಕ್ರಮ ವಿಸಾಜಿ   

ಧಾರವಾಡ: ಡಾ.ಗಿರಡ್ಡಿ ಗೋವಿಂದರಾಜ ಅವರ ಹೆಸರಿನಲ್ಲಿ, ನಗರದ ಗಿರಡ್ಡಿ ಗೋವಿಂದರಾಜ ಫೌಂಡೇಷನ್ ಪ್ರಸಕ್ತ ಸಾಲಿನಿಂದ ನೀಡುತ್ತಿರುವ ರಾಜ್ಯ ಮಟ್ಟದ ‘ಅತ್ಯುತ್ತಮ ವಿಮರ್ಶಾ ಕೃತಿ’ ಪ್ರಶಸ್ತಿಗೆ ಬೆಂಗ ಳೂರಿನ ಅಭಿನವ ಪ್ರಕಾಶನ ಪ್ರಕಟಿಸಿರುವ, ಕಲಬುರಗಿಯ ಡಾ.ವಿಕ್ರಮ ವಿಸಾಜಿ ಅವರ ‘ಪಠ್ಯದ ಭವಾವಳಿ’ ಕೃತಿ ಆಯ್ಕೆಯಾಗಿದೆ.

ಈ ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.ಇದು ಗಿರಡ್ಡಿ ಗೋವಿಂದರಾಜ ಫೌಂಡೇಷನ್ ವಿಮರ್ಶಾ ಕೃತಿಗೆ ನೀಡುತ್ತಿರುವ ಮೊದಲ ಪ್ರಶಸ್ತಿಯಾಗಿದೆ.

‘ಪ್ರಶಸ್ತಿಗಾಗಿ ರಾಜ್ಯದ ವಿವಿಧ ಭಾಗಗಳಿಂದ ಕೃತಿಗಳನ್ನು ಆಹ್ವಾನಿಸ ಲಾಗಿತ್ತು. ಡಾ.ರಾಜೇಂದ್ರ ಚೆನ್ನಿ, ಪ್ರೊ.ಟಿ.ಪಿ.ಅಶೋಕ ಮತ್ತು ಪ್ರೊ. ರಾಘವೇಂದ್ರ ಪಾಟೀಲ ಅವರಿದ್ದ ಆಯ್ಕೆ ಸಮಿತಿ ಡಾ.ವಿಕ್ರಮ ವಿಸಾಜಿ ಅವರ ವಿಮರ್ಶಾ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಶ ಮಾಚಕನೂರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.