ಮತದಾನ ಮಾಡುವುದು ಎಂದರೆ, ಸಮಾಜವನ್ನು ಕಟ್ಟುವುದು ಎಂದರ್ಥ. ಅದು ಪ್ರತಿ ಪ್ರಜೆಯ ನಾಗರಿಕ ಕರ್ತವ್ಯ ಕೂಡ ಹೌದು. ಪ್ರಜಾಪ್ರಭುತ್ವದ ಭಾಗವಾದಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರುಭಾಗವಹಿಸಬೇಕು. ಅಭ್ಯರ್ಥಿಗಳ ನಿಲುವು ಹಾಗೂ ಜೀವಪರ ಕಾಳಜಿಯನ್ನು ಅಳೆದು ತೂಗಿ ಮತ ಚಲಾಯಿಸಬೇಕು.
ಸಮಾನತೆ ಬಯಸುವವರನ್ನು ಹಾಗೂ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವವರನ್ನು ಗೆಲ್ಲಿಸಬೇಕು. ಉದ್ದೇಶಪೂರ್ವಕವಾಗಿ ಮತದಾನದಿಂದ ದೂರ ಉಳಿಯುವುದು ತಪ್ಪು, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು.
-ಚೇತನ್, ಚಲನಚಿತ್ರ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.