ADVERTISEMENT

ತಾಂತ್ರಿಕ ಕಾಲೇಜುಗಳಲ್ಲಿ ಕನ್ನಡ ಕಲಿಕೆ: ಅರ್ಹತಾ ಮಾನದಂಡ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 20:16 IST
Last Updated 17 ಮಾರ್ಚ್ 2019, 20:16 IST

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಪದವಿ ವಿದ್ಯಾರ್ಥಿಗಳು ವ್ಯವಹಾರಿಕ ಕನ್ನಡ ಮತ್ತು ಆಡಳಿತ ಕನ್ನಡ ಅಭ್ಯಾಸ ಸಂಬಂಧಿಸಿದಂತೆ ಮಾನದಂಡಗಳನ್ನು ರೂಪಿಸಿದೆ.

ಬಿಇ,ಬಿಟೆಕ್‌, ಬಿಪ್ಲಾನ್‌ 3ನೇ ಮತ್ತು 4 ನೇ ಸೆಮಿಸ್ಟರ್‌ಗಳಲ್ಲಿ ಹಾಗೂಬಿ.ಆರ್ಕಿಟೆಕ್ಟ್‌ಗಳಲ್ಲಿ ವ್ಯವಹಾರಿಕ ಕನ್ನಡ ಮತ್ತು ಆಡಳಿತ ಕನ್ನಡ ಕಲಿಕೆಗೆ ವಿಷಯ ನಿಗದಿ ಮಾಡಲಾಗಿದೆ.

ವ್ಯವಹಾರಿಕ ಕನ್ನಡ ನೋಂದಣಿಗೆ ಮಾನದಂಡ: ಪ್ರೌಢಶಿಕ್ಷಣದ (ಸಿಬಿಎಸ್‌ಇ/ಐಸಿಎಸ್ಇ ಅಥವಾ ಅಂತರರಾಷ್ಟ್ರೀಯ) ಯಾವುದೇ ಹಂತದಲ್ಲಿ ಕನ್ನಡ ಅಭ್ಯಸಿಸದವರು ಮತ್ತು ಕನ್ನ ಮಾತನಾಡಲು, ಬರೆಯಲು, ಓದಲು ಅರ್ಥವಾಗದೇ ಇರುವವರು.

ADVERTISEMENT

ವಿದ್ಯಾರ್ಥಿಗಳು ಪದವಿ ಕೋರ್ಸಿಗೆ ಪ್ರವೇಶ ಸಮಯದಲ್ಲಿ ನೀಡಿದ ಪ್ರಮಾಣ ಪತ್ರಗಳ ಆಧಾರದ ಮೇಲೆ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ವ್ಯವಹಾರಿಕ ಕನ್ನಡ ಮತ್ತು ಆಡಳಿತ ಕನ್ನಡಕ್ಕೆ ನೋಂದಣಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕುಲಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.