ADVERTISEMENT

‘ಚುನಾವಣೆ ಬಳಿಕ ನೀರಿಗೂ ದರ: ಸಚಿವ ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 20:09 IST
Last Updated 28 ಫೆಬ್ರುವರಿ 2019, 20:09 IST

ಬೆಂಗಳೂರು: ‘ಕುಡಿಯುವ ನೀರಿಗೆ ಬೆಲೆ ನಿಗದಿ ಮಾಡಬೇಕು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

‘ಜಲಾಮೃತ’ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜನರಿಗೆ ನೀರಿನ ಬೆಲೆ ಗೊತ್ತಾಗಬೇಕು. ₹ 50 ಇರಲಿ ₹ 25 ಇರಲಿ ಪ್ರತಿ ಮನೆಯವರೂ ಬೆಲೆ ಕೊಟ್ಟೇ ನೀರು ಪಡೆಯಬೇಕು. ಆಗಲಾದರೂ ಜಾಗೃತಿ ಮೂಡುತ್ತದೆ. ಚುನಾವಣೆಯ ಬಳಿಕ ಈ ನಿಟ್ಟಿನಲ್ಲಿ ಕೆಲಸ ಮಾಡಿ ಬೆಲೆ ನಿಗದಿಪಡಿಸಿ’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

‘ರಾಜ್ಯದ ಶೇ 41ರಷ್ಟು ಜನಸಂಖ್ಯೆ ನಗರಕ್ಕೆ ಸ್ಥಳಾಂತರಗೊಂಡಿರುವುದರಿಂದ ಹೆಚ್ಚು ಪ್ರಮಾಣದ ನೀರು ಬೇಕಾಗುತ್ತಿದೆ.

ADVERTISEMENT

ಹೀಗಾಗಿ, ಎತ್ತಿನಹೊಳೆ ನೀರನ್ನು ಅನಿವಾರ್ಯವಾಗಿ ತರಬೇಕಾಗಿದೆ. ಅದೂ ಮೂರು ತಿಂಗಳಿಗಷ್ಟೇ ಸಾಕಾಗುತ್ತದೆ. ಅಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಈ ನೀರನ್ನು ತರುವ ವೇಳೆ ಕಾಲುವೆಗೆ ಪಂಪ್‌ ಹಾಕಿ ನೀರು ಕದಿಯುವ ಸಾಧ್ಯತೆಯೂ ಇರುತ್ತದೆ. ಇದನ್ನು ತಡೆಗಟ್ಟಲೂ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿರ್ವಹಿಸಲು ಸಾಕಷ್ಟು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.