ADVERTISEMENT

ಉಜನಿಯಿಂದ ನೀರು ಬಿಡಿಸಲು ಕ್ರಮ: ಸಿಎಂ

​ಪ್ರಜಾವಾಣಿ ವಾರ್ತೆ
Published 14 ಮೇ 2019, 18:08 IST
Last Updated 14 ಮೇ 2019, 18:08 IST
ಎಚ್‌.ಡಿ. ಕುಮಾರಸ್ವಾಮಿ 
ಎಚ್‌.ಡಿ. ಕುಮಾರಸ್ವಾಮಿ    

ಅಫಜಲಪುರ (ಕಲಬುರ್ಗಿ ಜಿಲ್ಲೆ): ‘ಬತ್ತಿರುವ ಭೀಮಾ ನದಿಗೆಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿಉಜನಿ ಜಲಾಶಯದಿಂದ ನೀರು ಬಿಡಿಸಿಕೊಳ್ಳುತ್ತೇವೆ’ ಎಂದುಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ತಾಲ್ಲೂಕಿನ ದೇವಲಗಾಣಗಾಪುರದಲ್ಲಿ ಮಂಗಳವಾರ ವಿವಿಧ ಸಂಘ–ಸಂಸ್ಥೆಗಳವರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ವಿಜಯಪುರ, ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಅರಿತುಕೊಂಡಿದ್ದೇನೆ. ನೀರಿನ ಕೊರತೆ ಎದುರಾದಾಗಲೆಲ್ಲ ನೀರು ಬಿಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಕೇಳಿಕೊಳ್ಳುವುದು ಸರಿ ಅಲ್ಲ. ಅದರ ಬದಲು ನಾವೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.