ADVERTISEMENT

ಅಪರೂಪದ ವಿಡಿಯೊ: ಸುಂಟರಗಾಳಿ; ಮೋಡ ಮುಟ್ಟಿದ ಭೀಮಾನದಿಯ ನೀರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 7:04 IST
Last Updated 14 ಅಕ್ಟೋಬರ್ 2020, 7:04 IST

ಸಮುದ್ರ, ನದಿಯಂತಹ ನೀರಿನ ಮೂಲಗಳ ಮೇಲೆ ಸಹಜವಾಗಿ ಏಳುವ ಬಿರುಗಾಳಿ ಅಥವಾ ಸುಂಟರಗಾಳಿಯಿಂದ ಕೊಳವೆ ಆಕಾರದ ನೀರಸುಳಿಕಂಬ ಸೃಷ್ಟಿಯಾಗುತ್ತದೆ. ತಿರುಗುವ ರಭಸಲ್ಲಿ ನೀರು ಸಹ ದೂಳು–ಗಾಳಿಯೊಂದಿಗೆ ಆಗಸದತ್ತ ಸಾಗುತ್ತದೆ. ಕೆಲವು ಬಾರಿ ದಟ್ಟ ಮೋಡಗಳಲ್ಲೇ ಮುಟ್ಟಿದಂತೆ ಕಾಣುತ್ತದೆ.  ಭೀಮಾನದಿಯ ಮೇಲೆಯೂ ಇಂಥದ್ದೇ ಸುಂಟರಗಾಳಿ ಸೃಷ್ಟಿಯಾಗಿತ್ತು. ಇದನ್ನು ಇಂಗ್ಲಿಷ್‌ನಲ್ಲಿ ವಾಟರ್‌ಸ್ಪೌಟ್ಸ್‌ ಎಂದು ಕರೆಯಲಾಗುತ್ತದೆ (Waterspouts) ಎಂದು ಕರೆಯಲಾಗುತ್ತದೆ. ಸನ್ನತಿ ಗ್ರಾಮಸ್ಥರು ಈ ಅಪರೂಪದ ವಿಡಿಯೊ ಹಂಚಿಕೊಂಡಿದ್ದಾರೆ.

ಗಾಳಿಯ ಜೊತೆ ಸುರುಳಿ ಆಕಾರದಲ್ಲಿ ಆಕಾಶಕ್ಕೆ ಚಿಮ್ಮಿದ ಭೀಮಾ ನದಿ ನೀರು. ಸುಮಾರು 300 ಅಡಿ ಎತ್ತರಕ್ಕೆ ಚಿಮ್ಮಿದೆ. ಮಂಗಳವಾರ ಸಂಜೆ 5 ಗಂಟೆಗೆ ಜರುಗಿದ ಘಟನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT