ADVERTISEMENT

ಬಸವಣ್ಣ ವಿಚಾರ ಕೈಬಿಟ್ಟಿಲ್ಲ: ನಾಗೇಶ್‌

​ಪ್ರಜಾವಾಣಿ ವಾರ್ತೆ
Published 31 ಮೇ 2022, 20:22 IST
Last Updated 31 ಮೇ 2022, 20:22 IST
ನಾಗೇಶ್‌
ನಾಗೇಶ್‌   

ಬೆಂಗಳೂರು: ‘ಪರಿಷ್ಕರಣೆಯಾಗಿರುವ ಪಠ್ಯದಲ್ಲಿ ಬಸವಣ್ಣ ಅವರ ವಿಚಾರಗಳನ್ನು ಕೈಬಿಟ್ಟಿಲ್ಲ. ಅದು ಪೂರ್ಣ ಪ್ರಮಾಣದಲ್ಲಿಯೇ ಇದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಪರಿಷ್ಕರಣೆಗೊಂಡು ಪಠ್ಯಪುಸ್ತಕಗಳು ಮುದ್ರಣಗೊಂಡ ಬಳಿಕ ಮುಗಿಯಿತು. ಮತ್ತೊಮ್ಮೆ ಪರಿಷ್ಕರಣೆ ಸಮಿತಿಯನ್ನು ನೇಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ
ಎಂದರು.

ಮಕ್ಕಳು ಯಾವುದನ್ನು ಓದುತ್ತಾರೋ ಅದು ಪಠ್ಯದಲ್ಲಿ ಇರಬೇಕೇ ಹೊರತು ಸಿದ್ಧಾಂತಗಳನ್ನು ಪಠ್ಯದಲ್ಲಿ ಅಳವಡಿಸುವುದು ತಪ್ಪು. ಹೆಡಗೇವಾರ್‌ ಭಾಷಣದಲ್ಲಿ ಸಿದ್ಧಾಂತವಿಲ್ಲ. ಒಬ್ಬ ಮಗು ಯಾವುದನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂಬ ಸಂದೇಶವಿದೆ. ದೇಶದ ಅತಿ ದೊಡ್ಡ ಸಂಘಟನೆಯನ್ನು ಕಟ್ಟಿದವರು. ಈ ಪಠ್ಯದಲ್ಲಿರುವ ಅಂಶಗಳು ಕಲಿಕೆಗೆ ಯೋಗ್ಯವಾಗಿದೆ. ಅದರಲ್ಲಿರುವ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ
ವಿದ್ದರೆ ಹೇಳಿ, ಚರ್ಚೆ ಮಾಡೋಣ ಎಂದರು.

ADVERTISEMENT

‘ನಾಡಗೀತೆ ಬಗ್ಗೆ ಅವಹೇಳನಕಾರಿಯಾಗಿ ಬರೆದ ಸಂದೇಶವನ್ನು
ರೋಹಿತ್‌ ಚಕ್ರತೀರ್ಥ ಹಂಚಿಕೊಂಡಿದ್ದಾರೆ. ಅಂದಿನ ಸರ್ಕಾರ ಅವರ ಮೇಲೆ ಪ್ರಕರಣ ದಾಖಲಿಸಿ, ಬಿ ರಿಪೋರ್ಟ್‌ ಕೂಡಾ ಹಾಕಿತ್ತು. ಅದು ತಾವು ಬರೆದದ್ದು ಅಲ್ಲ ಎಂದು ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ. ಆದರೆ, ಕೆಲವರು ಆ ವಿಷಯವನ್ನು ಕೆದಕುತ್ತಿದ್ದಾರೆ. ಆದಿಚುಂಚನಗಿರಿಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಎಲ್ಲ ವಿಷಯವನ್ನು ತಿಳಿಸಿದ್ದೇನೆ’ ಎಂದರು.

‘ಮೈಸೂರು ಮಹಾರಾಜರ
ಬಗ್ಗೆ ಇದ್ದ ಪಠ್ಯವನ್ನು ಹಿಂದಿನ ಸಮಿತಿ ಏಕೆ ಕೈಬಿಟ್ಟಿತು. ಮಹಾ
ರಾಜರು ಬಲಪಂಥೀಯ ಎಂದು ತೀರ್ಮಾನಿಸಿ ಕೈಬಿಟ್ಟರಾ? ರಾಜ್ಯಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ ಮಹಾರಾಜರ
ಬಗ್ಗೆ ಓದಬಾರದು ತಿಳಿದುಕೊಳ್ಳ
ಬಾರದು ಎಂಬುದು
ಅವರ ಉದ್ದೇಶವಾ’ ಎಂದೂ
ಸಚಿವ ನಾಗೇಶ್‌ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.