ADVERTISEMENT

ಕೊರೊನಾ ಎಲ್ಲಿದೆ? ಒಬ್ಬರಾದರೂ ಐಸಿಯುನಲ್ಲಿ‌ ಮಲಗಿದ್ದಾರಾ?: ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್ ರಿಂದ ದೇಗುಲ‌ ಪ್ರದಕ್ಷಿಣೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 6:30 IST
Last Updated 8 ಜನವರಿ 2022, 6:30 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ರಾಮನಗರ: ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ಶನಿವಾರ ಕನಕಪುರಕ್ಕೆ ಆಗಮಿಸಿದ್ದು, ದೇಗುಲಗಳ ಭೇಟಿ ಕೈಗೊಂಡಿದ್ದಾರೆ.

ಮನೆ ದೇವರು ಕೆಂಕೇರಮ್ಮ ದೇವಿಗೆ ಮೊದಲ ಪೂಜೆ ಸಲ್ಲಿಸಿದ ಡಿಕೆಶಿ, ಪಾದಯಾತ್ರೆ ಯಶಸ್ಸಿಗೆ ಪ್ರಾರ್ಥಿಸಿದರು. ಬಳಿಕ ಕಬ್ಬಾಳಮ್ಮ, ಸಂಗಮ ಬಳಿಯ ಈಶ್ವರನ ಸನ್ನಿಧಿಗೂ ಅವರು ಭೇಟಿ ನೀಡಲಿದ್ದಾರೆ.

ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಶಿವಕುಮಾರ್ ' ನಾವು ಮಾಡುತ್ತಿರುವುದು ಪ್ರತಿಭಟನೆ ಅಲ್ಲ. ಜನಾಂದೋಲನ.‌ ಸರ್ಕಾರ ಏನೇ ನಿರ್ಬಂಧ ವಿಧಿಸಿದರೂ ನೀರಿಗಾಗಿ ನಮ್ಮ ನಡಿಗೆ ನಿಲ್ಲದು' ಎಂದರು.

ADVERTISEMENT

'ರಾಜ್ಯದಲ್ಲಿ ಕೊರೊನಾ ಎಲ್ಲಿದೆ? ಒಬ್ಬರಾದರೂ ಐಸಿಯು ನಲ್ಲಿ‌ ಮಲಗಿದ್ದಾರ? ರಾಜಕೀಯಕೋಸ್ಕರ ಯಾಕೆ ಸುಮ್ಮನೆ ಕಿರುಕುಳ ಕೊಡುತ್ತೀರ' ಎಂದು ಅವರು ಪ್ರಶ್ನಿಸಿದರು.

ಜಿಲ್ಲಾಡಳಿತ ಎಲ್ಲ ಪ್ರವಾಸಿ ತಾಣಗಳಿಗೂ‌ ನಿರ್ಬಂಧ ಹೇರಿದೆ. ಕೇಸ್ ಹಾಕೋ ಹಾಕಿದ್ದರೆ ಎಲ್ಲರ ಮೇಲೂ ಹಾಕಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.