ADVERTISEMENT

ಮಂಗಳೂರು ಚೂರಿ ಇರಿತ ಪ್ರಕರಣ:ಧೈರ್ಯದಿಂದ ಕರ್ತವ್ಯ ನಿರ್ವಹಿಸಿದ ನರ್ಸ್‌ಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 10:41 IST
Last Updated 30 ಜೂನ್ 2019, 10:41 IST
   

ಉಳ್ಳಾಲ: ಯುವತಿಗೆ ಇರಿದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕ- ಹೀಗೊಂದು ಶೀರ್ಷಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಗಂಬಿಲದಲ್ಲಿ ನಡೆದ ಕೊಲೆ ಯತ್ನದ ವಿಡಿಯೊ ಇದಾಗಿದ್ದು, ಈ ವಿಡಿಯೊದಲ್ಲಿ ಯುವತಿಗೆ ಹಲವಾರು ಬಾರಿ ಇರಿದ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ತನ್ನ ದೇಹದ ಮೇಲೆ ಚೂರಿಯಿಂದ ಗಾಯಗೊಳಿಸುತ್ತಿರುತ್ತಾನೆ.

ಸುತ್ತಲೂ ಮೂಕ ಪ್ರೇಕ್ಷಕರಾಗಿ ನಿಂತ ಜನರು ಒಂದೆಡೆಯಾದರೆ ಮಹಡಿ ಮೇಲೆ ನಿಂತವರು ಈ ಕೃತ್ಯವನ್ನುಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ರೋಷದಿಂದ ಚೂರಿ ಹಿಡಿದುಎಲ್ಲರನ್ನೂ ಬೆದರಿಸುತ್ತಿದ್ದ ಆ ಯುವಕನ ಹತ್ತಿರ ಹೋಗುವುದಾದರೂ ಹೇಗೆ? ಇರಿತಕ್ಕೊಳಗಾದ ಯುವತಿ ಜೀವನ್ಮರಣ ಹೋರಾಟದಲ್ಲಿ ಬಿದ್ದಿದ್ದಾಳೆ.ಆ ಹೊತ್ತಿಗೆ ಆ್ಯಂಬುಲೆನ್ಸ್ ಸದ್ದು. ಚೂರಿಯಿಂದ ಯುವತಿಗೆ ಇರಿಯುತ್ತಿದ್ದ ಯುವಕನ ಮುಂದೆ ಧೈರ್ಯವಾಗಿ ನುಗ್ಗಿ ಪರಿಸ್ಥಿತಿ ನಿಭಾಯಿಸುತ್ತಿರುವ ನರ್ಸ್.ಘಟನೆಯ ದೃಶ್ಯವನ್ನುಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವಾಗ ಅಲ್ಲಿ ಬೇಡ ಬೇಡ ಹೋಗಬೇಡ ಎಂಬ ದನಿಯೂ ಕೇಳಿಸುತ್ತದೆ. ಆದರೆ ಆ ನರ್ಸ್ ಪರಿಸ್ಥಿತಿಯನ್ನು ನಿಭಾಯಿಸಿ ಯುವಕನನ್ನು ಸರಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆಕೊಂಡೊಯ್ಯಲು ಸಹಾಯ ಮಾಡುತ್ತಾರೆ.

ADVERTISEMENT

ಕೆಲವೇ ಕ್ಷಣಗಳಲ್ಲಿ ಇನ್ನೊಂದು ಆ್ಯಂಬುಲೆನ್ಸ್‌ನಲ್ಲಿ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇಂಥಾ ಭೀಕರಘಟನೆ ನಡೆಯುತ್ತಿರುವಾಗದಿಟ್ಟತನದಿಂದ ತನ್ನ ಕರ್ತವ್ಯವನ್ನು ನಿರ್ವಹಿಸಿದ ನರ್ಸ್‌ಗೆಮೆಚ್ಚುಗೆಯ ಸುರಿಮಳೆಯಾಗುತ್ತಿದೆ.

ಕೇರಳ ಮೂಲದ ಈ ನರ್ಸ್ದಿ ನ್ಯೂಸ್ ಮಿನಿಟ್‌ ಜತೆ ಮಾತನಾಡಿದ್ದು, ನಾನು ನನ್ನ ಕರ್ತವ್ಯ ನಿರ್ವಹಿಸಿದೆ ಅಷ್ಟೇ ಅಂತಾರೆ.

ಎಂದಿನಂತೆ ತನ್ನ ಕರ್ತವ್ಯಕ್ಕೆ ಹಾಜರಾಗಲು ಹೋಗುತ್ತಿದ್ದಾಗ ಈ ಘಟನೆ ಬಗ್ಗೆ ತಿಳಿಯಿತು,.ಮೊದಲಿಗೆ ನಾನು ಅದೊಂದು ಅಪಘಾತ ಎಂದು ಅಂದುಕೊಂಡೆ.ಆಮೇಲೆ ಗೊತ್ತಾಯಿತು ಯುವತಿಯೊಬ್ಬಳಿಗೆ ಯುವಕ ಚೂರಿಯಿಂದ ಇರಿದಿದ್ದಾನೆ ಎಂಬುದು.

ತನ್ನ ಕಿವಿಗೆ ಬಿದ್ದ ಸಂಗತಿಯನ್ನು ಪೂರ್ಣವಾಗಿ ಅರ್ಥೈಸಿಕೊಳ್ಳುವ ಮುನ್ನವೇ ಆ್ಯಂಬುಲೆನ್ಸ್ ಸಿದ್ದ ಮಾಡಿ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಹೇಳಿದರು. ಕೆಲಸಕ್ಕೆ ಸೇರಿ ಆಗಿದ್ದು ಬರೀ 10 ತಿಂಗಳು. ಆಕೆ ಹೇಳಿದಂತೆ ಮಾಡಿದ್ದಳು.

ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಆವರಣದ ಹಿಂದಿರುವ ರಸ್ತೆಯಲ್ಲಿ ಈ ಭೀಕರ ಕೃತ್ಯ ನಡೆದಿತ್ತು. ಅಲ್ಲಿಗೆ ಹೋದಾಗ 27ರ ಹರೆಯದ ಸುಶಾಂತ್ ರಕ್ತದಲ್ಲಿ ಮುಳುಗಿದ್ದ, ಆತನ ಕತ್ತಿನ ಮೇಲೆ ಹರಿತವಾದ ಗೀರುಗಳಿದ್ದವು,

ಚೂರಿ ಹಿಡಿದುಕೊಂಡು ನಿಂತಿದ್ದ ಯುವಕನ ಮುಂದೆ ನಿಂತಾಗ ನನ್ನ ಮನಸ್ಸಿನಲ್ಲಿ ಯಾವ ವಿಷಯವೂ ಹೊಳೆಯಲಿಲ್ಲ.ನಾನು ನನ್ನ ಕೈ ಚಾಚಿಅವನಲ್ಲಿ ಕೇಳಿದೆ ನಿನ್ನ ಹೆಸರೇನು? ಎಂದು. ಆಗ ಅವನು ನಮ್ಮದು 5 ವರ್ಷದ ಸಂಬಂಧ, ಐದು ವರ್ಷದ ಸಂಬಂದ ಎಂದು ಇರಿತಕ್ಕೊಳಗಾಗಿರುವ ಯುವತಿಯತ್ತ ನೋಡುತ್ತಾ ಹೇಳುತ್ತಿದ್ದ.

ಅವನನ್ನು ಅಲ್ಲಿಂದ ಸರಿಸುವುದು ಕಷ್ಟದ ಕ್ಷಣ ಆಗಿತ್ತು. ಆದರೆ ನಾನು ಅವನನ್ನು ಸಂಭಾಳಿಸಿ ಯುವತಿಗೆ ಇರಿಯುವುದನ್ನು ನಿಯಂತ್ರಿಸಿದೆ. ಅಷ್ಟೊತ್ತಿಗೆ ಆಕೆಯ ಮೇಲೆ ಹಲವಾರು ಬಾರಿ ಇರಿದಾಗಿತ್ತು.ಆಮೇಲೆ ಆ್ಯಂಬುಲೆನ್ಸ್ ಮತ್ತು ಇತರ ಸಿಬ್ಬಂದಿಗಳು ಬಂದು ಆತನನ್ನು ಆಸ್ಪತ್ರೆಗೆ ಸಾಗಿಸಿದರು.

ಈ ಕೃತ್ಯದ ತೀವ್ರತೆ ಎಷ್ಟಿತ್ತು ಎಂಬುದು ಅವರನ್ನು ಆಸ್ಪತ್ರೆಗೆ ಸಾಗಿಸಿದ ಮೇಲೆಯೇ ನನ್ನಅನುಭವಕ್ಕೆ ಬಂದಿದ್ದು ಅಂತಾರೆ ಈ ನರ್ಸ್.

ಹಾಸ್ಪಿಟಲ್ ಬಾಲ್ಕನಿಯಿಂದ ಹಲವಾರು ಜನರು ನನ್ನ ಹೆಸರು ಕೂಗಿ ಜಾಗ್ರತೆಯಿರಲಿ ಎಂದರೆ ಹಲವಾರು ಮಂದಿಹೋಗಬೇಡ ಎಂದು ಕೂಗಿ ಹೇಳುತ್ತಿದ್ದರು, ಆ ಕ್ಷಣದಲ್ಲಿ ನಾನು ಬೇರೇನೂ ಯೋಚಿಸಿಲ್ಲ, ಇಂತಾ ಹೊತ್ತಲ್ಲಿ ತಲೆ ಓಡುವುದಿಲ್ಲ., ಯುವತಿಯೊಬ್ಬಳು ಅಲ್ಲಿ ಕೆಳಗೆ ಬಿದ್ದಿದ್ದಾಳೆ ಆಕೆಯನ್ನು ಹೇಗೆ ರಕ್ಷಿಸುವುದು ಎಂಬುದೇ ನನ್ನ ಗುರಿಯಾಗಿತ್ತು.ಅಲ್ಲಿಗೆ ಮೊದಲು ಧಾವಿಸಿದ್ದು ನಾನೇ ಎಂಬ ಪ್ರಜ್ಞೆಯೂ ನನಗಿರಲಿಲ್ಲ.

ಕೆಎಸ್ ಹೆಗ್ಡೆ ಹಾಸ್ಪಿಟಲ್‌ನಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿದ್ದ ಈಕೆ ಕಳೆದ 10 ತಿಂಗಳಿನಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಹಲವಾರು ಪ್ರಕರಣಗಳನ್ನು ನೋಡಿದ್ದೇನೆ, ಆದಕೆ ಕಣ್ಮುಂದೆಯೇ ಅಪರಾಧ ಕೃತ್ಯವೊಂದು ನಡೆದದ್ದು ಮೊದಲ ಬಾರಿ ಅಂತಾರೆ ಈ ದಾದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.