ADVERTISEMENT

ಯಡಿಯೂರಪ್ಪನದು 20 ಪರ್ಸೆಂಟ್ ಸರ್ಕಾರ: ಹೊರಟ್ಟಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 9:40 IST
Last Updated 7 ಮಾರ್ಚ್ 2020, 9:40 IST
   

ಹುಬ್ಬಳ್ಳಿ: ಸಿದ್ದರಾಮಯ್ಯ ಸರ್ಕಾರವನ್ನು ಪ್ರಧಾನಿ ಮೋದಿ ಅವರು ಶೇ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಲೇವಡಿ ಮಾಡಿದ್ದರು‌. ಆದರೆ, ಈಗಿನ ರಾಜ್ಯ ಬಿಜೆಪಿ ಸರ್ಕಾರ ಶೇ 20 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ ಎಂದುವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರ ಅತಿಯಾಗಿದೆ. ಜನಸಾಮಾನ್ಯರು ದುಡ್ಡು ಕೊಡದೇ ಯಾವುದೇ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿರುವ ಬೆಳಗಾವಿ ವಿಭಾಗ ಮಟ್ಟದ ಜೆಡಿಎಸ್ ಕಾರ್ಯಕರ್ತರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು‌. ಎಎಪಿ ಮಾದರಿಯಲ್ಲಿ ಜೆಡಿಎಸ್ ಅನ್ನು ಕಟ್ಟಿಬೆಳೆಸಬೇಕಾಗಿದೆ. ಈ ಹಿಂದೆ ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಪಕ್ಷವನ್ನು ಕಟ್ಟಿಬೆಳೆಸಬೇಕಾಗಿದೆ ಎಂದರು.

ಪುಸ್ತಕ ಬಿಡುಗಡೆ: ದೇವನೂರು ಮಹಾದೇವ ಅವರ 'ಈಗ ಭಾರತ ಮಾತನಾಡುತ್ತಿದೆ...' ಹಾಗೂ ಜೆಡಿಎಸ್ ಹೊರತಂದಿರುವ 'ಉತ್ತರ ಕರ್ನಾಟಕಕ್ಕೆ ದೇವೇಗೌಡರ ಕೊಡುಗೆ' ಎಂಬ ಎರಡು ಪುಸ್ತಕಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಿಡುಗಡೆ ಮಾಡಿದರು.

ADVERTISEMENT

'ನಾನು ರಾಜಕೀಯ ಪ್ರವೇಶಿಸಿ 59 ವರ್ಷವಾಯಿತು. ಅನೇಕ ಏಳುಬೀಳು ಕಂಡಿದ್ದೇನೆ. ಜೆಡಿಎಸ್ ಕೇವಲ ಹಳೇ ಮೈಸೂರಿಗೆ ಸೀಮಿತ, ದೇವೇಗೌಡ ಜಾತಿವಾದಿ, ಉತ್ತರ ಕರ್ನಾಟಕಕ್ಕೆ ಏನೂ ಮಾಡಿಲ್ಲ ಎಂದು ಬಿಂಬಿಸಲಾಗುತ್ತಿದೆ. ಈ ಬಗ್ಗೆ ಮುಕ್ತ ಚರ್ಚೆಯಾಗಬೇಕು' ಎಂದರು. ವೈಎಸ್ವಿ ದತ್ತ, ಕೋನರಡ್ಡಿ, ತಿಪ್ಪೇಸ್ವಾಮಿ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.