ADVERTISEMENT

ಯುವ ಕಾಂಗ್ರೆಸ್‌ಗೆ 15 ಮಂದಿ ವಕ್ತಾರರು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 19:42 IST
Last Updated 10 ನವೆಂಬರ್ 2021, 19:42 IST
ರಕ್ಷಾ ರಾಮಯ್ಯ
ರಕ್ಷಾ ರಾಮಯ್ಯ   

ಬೆಂಗಳೂರು: ರಾಜ್ಯಮಟ್ಟದ ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಗಾಗಿ ನಡೆದ ಭಾಷಣ ಸ್ಪರ್ಧೆ ‘ಯಂಗ್ ಇಂಡಿಯಾ ಕಿ ಬೋಲ್’ನಲ್ಲಿ (ಯುವ ಭಾರತ ಮಾತನಾಡಿ) 15 ಮಂದಿ ಆಯ್ಕೆಯಾಗಿದ್ದು, ಅವರನ್ನು ರಾಜ್ಯಮಟ್ಟದ ವಕ್ತಾರರಾಗಿ ನಿಯೋಜಿಸಲಾಗುವುದು’ ಎಂದು ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ತಿಳಿಸಿದರು.

‘ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಜನಪರ ಸಮಸ್ಯೆಗಳ ಕುರಿತು ಭಾಷಣ ಸ್ಪರ್ಧೆ ನಡೆಸಲಾಗಿತ್ತು. ಇದೇ ತಿಂಗಳ 14ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಹಂತದ ಸ್ಪರ್ಧೆಯಲ್ಲಿ ಈ 15 ಮಂದಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ’ ಎಂದು ಅವರು ಹೇಳಿದರು.

‘ಜನಪರ ಸಮಸ್ಯೆಗಳು, ಅದರಲ್ಲೂ ಪ್ರಮುಖವಾಗಿ ಯುವ ಸಮೂಹ ಎದುರಿಸುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಪ್ರಜಾಪ್ರಭುತ್ವದ ಕಗ್ಗೊಲೆ, ಬೆನ್ನು ಮುರಿಯುವ ಹಣದುಬ್ಬರ ತಡೆಯುವಲ್ಲಿ ಬಿಜೆಪಿ ಸರ್ಕಾರದ ವಿಫಲತೆ, ಕೋವಿಡ್‌ ನಿರ್ವಹಣೆಯಲ್ಲಿನ ಲೋಪ ಕುರಿತು ಸ್ಪರ್ಧಿಗಳು ಪಾಂಡಿತ್ಯಪೂರ್ಣವಾಗಿ ವಿಷಯ ಮಂಡಿಸಿದರು’ ಎಂದರು.

ADVERTISEMENT

ಯಂಗ್ ಇಂಡಿಯಾ ಬೋಲ್’ ಕಾರ್ಯಕ್ರಮದ ಉಸ್ತುವಾರಿ ಪ್ರೀತಿ ಶೇಷ ಅವರು ಸ್ಪರ್ಧೆಗೆ ಚಾಲನೆ ನೀಡಿದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್, ಸುರಭಿ ದ್ವಿವೇದಿ, ಬಲರಾಂ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.