ADVERTISEMENT

ಬಳ್ಳಾರಿಯ ಬಂಡಿಹಟ್ಟಿಯಲ್ಲಿ ಇರುವ ಯೂಟ್ಯೂಬರ್‌ ಸಮೀರ್‌ ಮನೆಗೆ ಪೊಲೀಸ್ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 19:53 IST
Last Updated 23 ಆಗಸ್ಟ್ 2025, 19:53 IST
<div class="paragraphs"><p>ಬಳ್ಳಾರಿಯ ಬಂಡಿಹಟ್ಟಿಯಲ್ಲಿ ಇರುವ ಸಮೀರ್‌ ಎಂ.ಡಿ ಮನೆ</p></div>

ಬಳ್ಳಾರಿಯ ಬಂಡಿಹಟ್ಟಿಯಲ್ಲಿ ಇರುವ ಸಮೀರ್‌ ಎಂ.ಡಿ ಮನೆ

   

ಬಳ್ಳಾರಿ: ‘ದೂತ’ ಯೂಟ್ಯೂಬ್ ಚಾನೆಲ್‌ನಲ್ಲಿ ಧರ್ಮಸ್ಥಳ ಕುರಿತ ವಿಡಿಯೊ ಪ್ರಸಾರ ಕುರಿತಂತೆ ಭಾನುವಾರ (ಆ.24) ಧರ್ಮಸ್ಥಳ ಠಾಣೆ ಅಥವಾ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಗೆ ಹಾಜರಾಗಲು ಯೂಟ್ಯೂಬರ್‌ ಸಮೀರ್ ಎಂ.ಡಿಗೆ ಸೂಚಿಸಲಾಗಿದೆ.

ಈ ಸಂಬಂಧ ಬಳ್ಳಾರಿಯ ಬಂಡಿಹಟ್ಟಿಯಲ್ಲಿ ಇರುವ ಸಮೀರ್ ಅವರ ಮನೆಗೆ ನೋಟಿಸ್‌ ಅಂಟಿಸಲಾಗಿದೆ. ‘ಈ ಬಗ್ಗೆ ಜುಲೈ 12ರಂದು ಪ್ರಕರಣ ದಾಖಲಾಗಿದೆ. ಸಮೀರ್‌ಗೆ ಮೂರು ನೋಟಿಸ್ ನೀಡಲಾಗಿದೆ. ಆತ ವಿಚಾರಣೆಗೆ ಹಾಜರಾಗಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.