ADVERTISEMENT

50 ವರ್ಷಗಳ ಹಿಂದೆ | ಗುರುವಾರ, 3–9–1970

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 15:05 IST
Last Updated 2 ಸೆಪ್ಟೆಂಬರ್ 2020, 15:05 IST
   

ರಾಜಧನ ರದ್ದು: ಸಂವಿಧಾನಕ್ಕೆ ತಿದ್ದುಪಡಿ

ನವದೆಹಲಿ, ಸೆ. 2– ರಾಜಧನ ಮತ್ತು ಮಾಜಿ ಅರಸರ ವಿಶೇಷ ಹಕ್ಕು ಹಾಗೂ ಸೌಲಭ್ಯಗಳನ್ನು ರದ್ದುಪಡಿಸುವ ಮಸೂದೆಗೆ ಲೋಕಸಭೆ ಇಂದು ಒಪ್ಪಿಗೆ ನೀಡಿ, ರಾಷ್ಟ್ರದಿಂದ ಅರಸೊತ್ತಿಗೆಯ ಉಳಿಕೆಗಳನ್ನು ಸಂಪೂರ್ಣವಾಗಿ ತೊಡೆದುಹಾಕಿತು.

ಇದಕ್ಕೆ ಸಂಬಂಧಿಸಿದ ಐತಿಹಾಸಿಕ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಗತ್ಯ ಬಹುಮತದಿಂದ ಅಂಗೀಕರಿಸಲಾಯಿತು.

ADVERTISEMENT

ಮಾಜಿ ಅರಸರಿಂದ ಸಂಸತ್‌ ಸದಸ್ಯರಿಗೆ ಲಂಚದ ಆಮಿಷ

ನವದೆಹಲಿ, ಸೆ. 2– ರಾಜಧನ ರದ್ದು ಮಸೂದೆ ವಿರುದ್ಧ ಮತ ನೀಡುವುದಕ್ಕಾಗಿ ಸಂಸತ್‌ ಸದಸ್ಯರಿಗೆ ಲಂಚ ಕೊಡಲು ಮಾಜಿ ಅರಸರು ಪ್ರಯತ್ನಿಸುತ್ತಿದ್ದಾರೆಂದು ಬಲ ಕಮ್ಯುನಿಸ್ಟ್‌ ಪಕ್ಷದ ಭೂಪೇಶ ಗುಪ್ತ ಅವರು ಇಂದು ರಾಜ್ಯಸಭೆಯಲ್ಲಿ ಆಪಾದಿಸಿದರು.

ಈ ಬಗ್ಗೆ ತಮ್ಮಲ್ಲಿ ನಿರ್ದಿಷ್ಟ ಸಮಾಚಾರವಿದೆಯಂದು ನುಡಿದ ಅವರು ಇದನ್ನು ಸಾಕ್ಷ್ಯ ನೀಡಿ ಋಜುವಾತು ಪಡಿಸುವುದಾಗಿ ಹೇಳಿದರು.

ಮಂಗಳವಾರ ಇಡೀ ರಾತ್ರಿ ಮಾಜಿ ಅರಸರು ಸಂಸತ್‌ ಸದಸ್ಯರುಗಳನ್ನು ತಮ್ಮ ನಿವಾಸಕ್ಕೆ ಕರೆದೊಯ್ದು ಹಣ ಕೊಡುವುದರಲ್ಲಿ ನಿರತರಾಗಿದ್ದರು ಎಂದು ನುಡಿದ ಅವರು, ಈ ಸಂಬಂಧದಲ್ಲಿ ಸಂಸತ್ತಿನ ನಾಲ್ವರು ಆದಿವಾಸಿ ಸದಸ್ಯರನ್ನು ಹೆಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.