ADVERTISEMENT

ಜರ್ಮನಿ: ಸಿರಿಗನ್ನಡ ಕೂಟದಿಂದ ಗಣೇಶ ಉತ್ಸವ; ವಿದೇಶದಲ್ಲೂ ಪರಂಪರೆಯ ಪರಿಮಳ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:30 IST
Last Updated 4 ಸೆಪ್ಟೆಂಬರ್ 2025, 6:30 IST
<div class="paragraphs"><p>ಸಿರಿಗನ್ನಡ ಕೂಟದಿಂದ ಗಣೇಶ ಉತ್ಸವ</p></div>

ಸಿರಿಗನ್ನಡ ಕೂಟದಿಂದ ಗಣೇಶ ಉತ್ಸವ

   

ಮ್ಯೂನಿಕ್‌: ಇಲ್ಲಿನ ಸಿರಿಗನ್ನಡ ಕೂಟವು ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿತು. 

ಆಗಸ್ಟ್ 31ರ ಭಾನುವಾರ ಇಲ್ಲಿನ ಎವೆನ್‌ವೆಲ್ಥಾಸ್‌ ಸಭಾಂಗಣದಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಯಿತು.

ADVERTISEMENT

ಆರ್ಚಕರಾದ ಸೀತರಾಮ ಶರ್ಮ ಅವರು ಗಣಪತಿಗೆ ಪೂಜೆ ಕಾರ್ಯ ನೆರವೇರಿಸಿದರು. ಸಾಮೂಹಿಕ ಪೂಜೆ, ಮಂಗಳಾರತಿ ಸೇರಿದಂತೆ ನೆರೆದಿದ್ದ ಭಕ್ತರು ಮಂತ್ರ ಪಠಣ ಮಾಡುವ ಮೂಲಕ ಭಾವಪರವಶರಾದರು.

ಗಣೇಶ

ಇದೇ ವೇಳೆ ಲೋಹಿತ್ ಬ್ರಹ್ಮರವರ ಬಾಸುರಿ ಕಚೇರಿಯು ನೆರದಿದ್ದ ಭಕ್ತರ ಮನಸಿಗೆ ಮಧುರತೆಯನ್ನು ತುಂಬಿತು.

ಮಕ್ಕಳು ಶ್ಲೋಕಗಳನ್ನು ಪಠಿಸಿದರು. ಅರ್ಪಿತಾ, ಸ್ವಸ್ತಿ ಅವರು ಸಂಗೀತ ಸುಧೆ ಹರಿಸಿದರು. ಸುಕನ್ಯಾ ಲಕ್ಷ್ಮಿಕಾಂತ್ ಶ್ಲೋಕ ಪಠಣ ಮಾಡಿದರು. ಮಕ್ಕಳು ಭರತನಾಟ್ಯ ಪ್ರದರ್ಶನ ನೀಡಿದರು. ಹಾಗೂ ಗಣೇಶನ ವಿಷಯಾಧಾರಿತ ರಸಪ್ರಶ್ನೆ ಚಟುವಟಿಕೆ, ಪಜ಼ಲ್ ಆಟಗಳನ್ನು ಆಯೋಜನೆ ಮಾಡಲಾಗಿತ್ತು. 

ಭಜನೆಗಳ ಝೇಂಕಾರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವ ಮೂಲಕ ಕಾರ್ಯಕ್ರಮವು ಸಮಾರೋಪಗೊಂಡಿತು.

ಈ ಗಣೇಶೋತ್ಸವವು ಸಾಂಪ್ರದಾಯಿಕ ಪೂಜೆ, ರುಚಿಕರ ಊಟ, ನಗು, ನಾದ, ಸಂಸ್ಕೃತಿ, ಭಕ್ತಿ ಮತ್ತು ಬಾಂಧವ್ಯದೊಂದಿಗೆ ನೆರವೇರಿತು. ಈ ಉತ್ಸವ ನಿತ್ಯ ನೆನಪಿನಲ್ಲಿ ಉಳಿಯುವ ಹಬ್ಬವಾಯಿತು ಎಂದು ಸಿರಿಗನ್ನಡ ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಸ್ವಯಂ ಸೇವಕರಿಗೆ ಹಾಗೂ ಭಾಗವಹಿಸಿದ ಎಲ್ಲಾ ಸಹೃದಯರಿಗೆ ಮ್ಯೂನಿಕ್‌ನ ಸಿರಿಗನ್ನಡಕೂಟ ಧನ್ಯವಾದಗಳನ್ನು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.