ADVERTISEMENT

ನಾ ಕಂಡ ಬೆಂಗಳೂರು: ಎಸ್.ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 10:56 IST
Last Updated 27 ಏಪ್ರಿಲ್ 2019, 10:56 IST

‘ನಾನು ಅಪ್ಪಟ ಬೆಂಗಳೂರು ಮನುಷ್ಯ. ಮಣ್ಣಿನ ಮಗ, ಹಳ್ಳಿಯಿಂದ ಬಂದವನು ಎಂದು ಹೇಳಿಕೊಳ್ಳಲು ಅವಕಾಶವೇ ಇಲ್ಲ’ ಎಂದು ಅಲವತ್ತುಕೊಳ್ಳುವಷ್ಟು ಅಪ್ಪಟ ಬೆಂಗಳೂರಿಗರು ಎಸ್.ಸುರೇಶ್‌ಕುಮಾರ್ (ಜನನ: ನವೆಂಬರ್ 11, 1955). ಚಿಕ್ಕ ವಯಸ್ಸಿನಲ್ಲೇ ಆರ್‌ಎಸ್‌ಎಸ್‌ ಸೇರಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. 1983ರಲ್ಲಿ ರಾಮಕೃಷ್ಣ ಹೆಗಡೆ ಅವರ ಜನಪ್ರಿಯತೆಯ ನಡುವೆಯೂ ಬಿಜೆಪಿಯಿಂದ (ಶ್ರೀರಾಂಪುರ ವಾರ್ಡ್‌) ಪಾಲಿಕೆ ಸದಸ್ಯರಾಗಿ ಆಯ್ಕೆಯಾದರು. 1994, 1999, 2008, 2013ರಲ್ಲಿ ಶಾಸಕರಾಗಿ ಆಯ್ಕೆಯಾದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾನೂನು, ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.