ಲುವಾಂಡ (ಎಎಫ್‌ಪಿ): ಅಂಗೋಲಾದ ಅಧ್ಯಕ್ಷ ಜೋಸ್ ಎಡ್ವರ್ಡೊ ಡಸ್ ಸಂತಾಸ್ ಅವರನ್ನು ಪದಚ್ಯುತಿಗೊಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಪ್ರತ್ರಕರ್ತರೂ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಕಳೆದ ತಿಂಗಳಿಂದ ಈವರೆಗೆ ಇಂಟರ್‌ನೆಟ್ ಮೂಲಕ ‘ಈಜಿಪ್ಟ್ ಶೈಲಿಯ ಪ್ರತಿಭಟನೆ ಮಾರ್ಚ್ 7ರಿಂದ ಪ್ರಾರಂಭವಾಗಲಿದೆ...’ ಎಂಬ ವದಂತಿ ಚಲಾವಣೆಯಲ್ಲಿತ್ತು. ಈ ಹಿನ್ನೆಲೆಯಲ್ಲಿ ನಡೆದ ಭಾರಿ ಶೋಧದಲ್ಲಿ ಈ ಐದು ಮಂದಿಯನ್ನು ಬಂಧಿಸಲಾಗಿದೆ. ಅಧ್ಯಕ್ಷರ ಮೂರು ದಶಕಗಳ ಅವಧಿಯ ಆಳ್ವಿಕೆ ವಿರುದ್ಧ ಭಾರಿ ಜನಾಂದೋಲನ ನಡೆಸಲು ಸಂಚು ರೂಪಿಸಿದ್ದು, ಅದನ್ನು ಕಾರ್ಯಗತಗೊಳಿಸುವ ಹಂತದಲ್ಲಿ ಈ ಯದು ಮಂದಿ ಹೋರಾಟಗಾರರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರಲ್ಲಿ ‘ನೊವೊ ಜರ್ನಲ್ ಡೈಲಿ’ಯ ಪತ್ರಕರ್ತರು, ಅವರ ವಾಹನ ಚಾಲಕ, ಮತ್ತೊಬ್ಬ ಕ್ರಾಂತಿಕಾರಿ ಕವಿ ಸೇರಿದ್ದಾರೆ ಎಂದು ‘ಮಂಗೊವೊ ನಗೊಯೊ’ ಪತ್ರಿಕೆ ಪ್ರಕಟಿಸಿದೆ.ಸೋಮವಾರ ಮಧ್ಯರಾತ್ರಿ ಪ್ರತಿಭಟನಾಕಾರರೆಲ್ಲರೂ ಫಲಕಗಳನ್ನು ಹಿಡಿದು, ‘ಜೋಸ್ ಎಡ್ವರ್ಡೊ ಡಸ್ ಪದತ್ಯಾಗಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುವರು ಎಂದು ‘ಫೇಸ್‌ಬುಕ್’ನ ‘ಅಂಗೋಲನ್ ಪೀಪಲ್ಸ್ ರೆವೆಲ್ಯೂಷನ್’ ಎಂಬ ಪುಟದಲ್ಲಿ ಪ್ರಕಟವಾಗಿತ್ತು. ಆದರೆ ಇದು ಅನಾಮಧೇಯರಿಂದ ರಚನೆಯಾಗಿತ್ತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.