ADVERTISEMENT

ಅಂಟಾರ್ಕ್ಟಿಕಾ: ಬೃಹತ್‌ ಮಂಜುಗಡ್ಡೆ ಹೋಳು

1 ಲಕ್ಷ ಕೋಟಿ ಟನ್‌ ತೂಕ: ಸಮುದ್ರಯಾನಕ್ಕೆ ಅಪಾಯ

ಪಿಟಿಐ
Published 13 ಜುಲೈ 2017, 4:52 IST
Last Updated 13 ಜುಲೈ 2017, 4:52 IST
ಅಂಟಾರ್ಕ್ಟಿಕಾದಲ್ಲಿ ಬೃಹತ್‌ ಮಂಜುಗಡ್ಡೆ  ರಾಯಿಟರ್ಸ್‌ ಚಿತ್ರ
ಅಂಟಾರ್ಕ್ಟಿಕಾದಲ್ಲಿ ಬೃಹತ್‌ ಮಂಜುಗಡ್ಡೆ ರಾಯಿಟರ್ಸ್‌ ಚಿತ್ರ   

ಲಂಡನ್‌: ಅಂಟಾರ್ಕ್ಟಿಕಾದಲ್ಲಿ ಬೃಹತ್‌ ಮಂಜುಗಡ್ಡೆ ಹೋಳಾಗಿದೆ.

ಹಲವು ತಿಂಗಳುಗಳಿಂದ ಇದು ಹೋಳಾಗುವ ಸ್ಥಿತಿಯಲ್ಲಿತ್ತು. ಈ ಬೃಹತ್‌ ಮಂಜುಗಡ್ಡೆ 1 ಲಕ್ಷ ಸಾವಿರ ಕೋಟಿ ಟನ್‌ ತೂಕದಷ್ಟು ಭಾರವಿದೆ ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷ ನವೆಂಬರ್‌ 10ರಂದು ‘ಲಾರ್ಸೆನ್‌ ಸಿ’ ಹೆಸರಿನ ಮಂಜುಗಡ್ಡೆಯಲ್ಲಿ ಬಿರುಕು ಉಂಟಾಗಿರುವ ಚಿತ್ರಗಳನ್ನು ನಾಸಾ ವಿಜ್ಞಾನಿಗಳು ಬಿಡುಗಡೆ ಮಾಡಿದ್ದರು.

ADVERTISEMENT

‘ಲಾರ್ಸೆನ್‌ ಸಿ’ ಮಂಜುಗಡ್ಡೆಯಿಂದ ಬೇರ್ಪಟ್ಟಿರುವ ಈ ಮಂಜುಗಡ್ಡೆ ಅಂಟಾರ್ಕ್ಟಿಕಾದ ಸುತ್ತಮುತ್ತಲಿನ ಹಡಗುಗಳ ಸಂಚಾರಕ್ಕೆ ಸಮಸ್ಯೆಯಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಂಟಾರ್ಕ್ಟಿಕಾದ ಮಂಜುಗಡ್ಡೆಗಳ ಕುರಿತು ಹಲವು ವರ್ಷಗಳಿಂದ ನಿಗಾ ವಹಿಸಿರುವ ಸಂಶೋಧಕರು, ಜುಲೈ 10 ಹಾಗೂ 12ರ ನಡುವಿನ ಅವಧಿಯಲ್ಲಿ ಮಂಜುಗಡ್ಡೆ ಹೋಳಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.