ಕ್ವಾಲಾಲಂಪುರ (ರಾಯಿಟರ್ಸ್): ಒಂದು ವಾರದಿಂದ ಕಣ್ಮರೆಯಾಗಿರುವ ಮಲೇಷ್ಯಾ ವಿಮಾನದ ಅವಶೇಷಗಳನ್ನು ಅಂಡಮಾನ್ ದ್ವೀಪ ಸಮೂಹದಲ್ಲಿ ಇಲ್ಲಿನ ಸೇನಾ ರಾಡರ್ ಪತ್ತೆ ಹಚ್ಚಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಲೇಷ್ಯಾ ಸೇನಾ ರಾಡರ್ ವಿಮಾನವೊಂದನ್ನು ಪತ್ತೆ ಹಚ್ಚಿದ್ದು ಅದು ನಾಪತ್ತೆಯಾಗಿರುವ ಮಲೇಷ್ಯಾ ವಿಮಾನವೇ ಇರಬೇಕು ಎಂದು ಶಂಕಿಸಲಾಗಿದೆ.
ಅಂಡಮಾನ್ ದ್ವೀಪ ಹಾಗೂ ಬಂಗಾಳ ಕೊಲ್ಲಿ ನಡುವೆ ವಿಮಾನ ಪತವಾಗಿರುವ ಬಗ್ಗೆ ರಾಡರ್‌ಗೆ ಮಾಹಿತಿ ಲಭ್ಯವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.