ವಾಷಿಂಗ್ಟನ್ (ಪಿಟಿಐ): ಪ್ರಸ್ತುತ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿ ಭಿನ್ನಮತ ಮೂಡಿದ್ದರೂ, ಭಾರತದ ಬಾಹ್ಯಾಕಾಶ ಸಂಸ್ಥೆ ‘ಇಸ್ರೊ’ ವಿಜ್ಞಾನಿಗಳು ಅಮೆರಿಕ ಆಯೋಜಿಸಿರುವ ಪ್ರಪ್ರಥಮ ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನೆ ಮೇಲಿನ ಸಚಿವರ ಮಟ್ಟದ ಸಭೆಯಲ್ಲಿ ಭಾಗವಹಿಸಿದೆ.
‘ಸ್ಯಾಕ್’ (ಬಾಹ್ಯಾಕಾಶ ಅನ್ವಯಿಕ ಕೇಂದ್ರ)ದ ಸಹ ನಿರ್ದೇಶಕ ಎ.ಎಸ್. ಕಿರಣ್ ಕುಮಾರ್ ನೇತೃತ್ವ ನಿಯೋಗವು ಗುರುವಾರದಿಂದ ಆರಂಭವಾಗಿರುವ ಎರಡು ದಿನಗಳ ಬಾಹ್ಯಾಕಾಶ ಸಂಶೋಧನಾ ಸಮ್ಮೇಳನ ಮತ್ತು ಬಾಹ್ಯಾಕಾಶ ಸಂಸ್ಥೆಗಳ ಮುಖ್ಯಸ್ಥರ ಶೃಂಗಸಭೆಯಲ್ಲಿ ಪಾಲ್ಗೊಂಡಿದೆ.
ಭಾರತೀಯ ನಿಯೋಗವು ಸಚಿವರ ಮಟ್ಟದಲ್ಲಾಗಲೀ ಅಥವಾ ಇಸ್ರೊ ಮುಖ್ಯಸ್ಥ ಡಾ. ಕೆ. ರಾಧಾಕೃಷ್ಣನ್ ನೇತೃತ್ವದಲ್ಲಾಗಲೀ ಪಾಲ್ಗೊಂಡಿಲ್ಲ. ಇಂತಹ ಪ್ರಮುಖ ಸಮ್ಮೇಳನಕ್ಕೆ ಭಾರತೀಯ ನಿಯೋಗ ಪ್ರತಿನಿಧಿಸುವ ಬಗ್ಗೆ ಯಾವುದೇ ಅಧಿಕೃತ ವಿವರಣೆ ನೀಡಿಲ್ಲ.
ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಜೆನ್ ಸಾಕಿ, ಗುರುವಾರ ಈ ಸಮ್ಮೇಳನದ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿ, ಶುಕ್ರವಾರ ಭಾರತೀಯ ನಿಯೋಗವನ್ನು ಇಲಾಖೆ ಸ್ವಾಗತಿಸುತ್ತದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.