ADVERTISEMENT

ಅಜರ್‌ ಜಂಟಿ ತನಿಖೆಯ ಭಾರತ ಮನವಿಗೆ ಪಾಕ್‌ ನಕಾರ?

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 11:52 IST
Last Updated 25 ಜನವರಿ 2016, 11:52 IST
ಜೆಎಎಂ ಮುಖ್ಯಸ್ಥ ಮಸೂದ್ ಅಜರ್
ಜೆಎಎಂ ಮುಖ್ಯಸ್ಥ ಮಸೂದ್ ಅಜರ್   

ಇಸ್ಲಾಮಾಬಾದ್‌ (ಪಿಟಿಐ): ಪಠಾಣ್‌ಕೋಟ್‌ ಮೇಲಿನ ಉಗ್ರರ ದಾಳಿ ಘಟನೆಯ ಶಂಕಿತ ಸಂಚುಕೋರರಾದ ಜೈಷ್‌–ಎ–ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ ಹಾಗೂ ಇತರರನ್ನು ಜಂಟಿಯಾಗಿ ತನಿಖೆಗೆ ಒಳಪಡಿಸುವ ಭಾರತದ ಪ್ರಸ್ತಾವವನ್ನು ಪಾಕಿಸ್ತಾನ ತಿರಸ್ಕರಿಸಿದೆ.

ಹೀಗೆಂದು ಪಾಕಿಸ್ತಾನ ಮಾಧ್ಯಮ ‘ದ ನೇಷನ್‌’ ವರದಿ ಮಾಡಿದೆ.

ಪಾಕಿಸ್ತಾನ ತನಿಖಾಧಿಕಾರಿಗಳು ಅಜರ್‌ನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಆ ಮಾಧ್ಯಮ ವರದಿ ಮಾಡಿದೆ.

ADVERTISEMENT

ಅಜರ್‌ ಹಾಗೂ ಆತನ ಸಹೋದರನನ್ನು ತನಿಖೆಗೆ ಒಳಪಡಿಸಲು ಭಾರತವು ತನಿಖಾಧಿಕಾರಿಗಳನ್ನು ಕಳುಹಿಸಲು ಬಯಸಿತ್ತು. ಆದರೆ ಪಾಕಿಸ್ತಾನವು ‘ವಿನೀತವಾಗಿ ಅದನ್ನು ತಳ್ಳಿಹಾಕಿತು’ ಎಂದು ಅದು ವರದಿ ಮಾಡಿದೆ.

ಪಠಾಣ್‌ಕೋಟ್‌ ದಾಳಿ ಘಟನೆಯ ಬಳಿಕ ಅಜರ್‌ ‘ರಕ್ಷಣಾ ಬಂಧನ’ದಲ್ಲಿದ್ದಾನೆ. ಆತನ ಸಹೋದರ ಅಬ್ದುಲ್‌ ರೆಹಮಾನ್ ರವೂಫ್‌ ಕೂಡ ಪೊಲೀಸರ ವಶದಲ್ಲಿದ್ದಾನೆ. ಉಗ್ರರ ದಾಳಿ ಬಳಿಕ ಅಜರ್ ಮಾತ್ರವಲ್ಲದೇ ಹಲವು ಶಂಕಿತರನ್ನು ಬಂಧಿಸಿದ್ದ ಪಾಕಿಸ್ತಾನ ಸರ್ಕಾರ, ಜೈಷ್–ಎ–ಮೊಹಮ್ಮದ್ ಸಂಘಟನೆ ವಿವಿಧೆಡೆ ನಡೆಸುತ್ತಿದ್ದ ಮದರಸಾಗಳಿಗೆ ಬೀಗ ಜಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.