ಇಸ್ಲಾಮಾಬಾದ್ (ಪಿಟಿಐ): ತಾಲಿಬಾನ್ ಬೆದರಿಕೆ ಹಾಗೂ ಲಾಡೆನ್ ಹತ್ಯೆಗೆ ನಡೆದ ಅಬೊಟಾಬಾದ್ ಮಾದರಿ ಕಾರ್ಯಾಚರಣೆ ಸಾಧ್ಯತೆಯ ಆತಂಕದ ಕಾರಣ ಅಣು ವಿಜ್ಞಾನಿ ಎ.ಕ್ಯು.ಖಾನ್ ಅವರಿಗೆ ನೀಡಲಾದ ಭದ್ರತೆಯನ್ನು ಮೂರುಪಟ್ಟು ಹೆಚ್ಚಿಸಲಾಗಿದೆ.
ಪ್ರಧಾನಿ ಭದ್ರತೆಗೆ ಸಮನಾದ ರಕ್ಷಣೆಯನ್ನು ಖಾನ್ ಅವರಿಗೆ ನೀಡಲಾಗಿದೆ. ಉತ್ತರ ಕೊರಿಯಾ ಹಾಗೂ ಲಿಬಿಯಾಗೆ ಪರಮಾಣು ಬಾಂಬ್ ತಯಾರಿಕೆ ತಂತ್ರಜ್ಞಾನದ ಮಾಹಿತಿ ನೀಡಿದ ಆರೋಪದ ಮೇಲೆ ಅವರನ್ನು 2004ರಲ್ಲಿ ಗೃಹ ಬಂಧನದಲ್ಲಿ ಇಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.