ADVERTISEMENT

ಅಣ್ಣಾ ಮಾರ್ಗ ಹಿಡಿದ ನೇಪಾಳ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಕಠ್ಮಂಡು (ಐಎಎನ್‌ಎಸ್): ಅಣ್ಣಾ ಹಜಾರೆ ಅವರ ಚಳವಳಿಯಿಂದ ಪ್ರೇರಣೆ ಪಡೆದಿರುವ ಇಲ್ಲಿನ ಐಟಿಸಿ ಜಂಟಿ ಸಹಭಾಗಿತ್ವದ ಜವಳಿ ಉದ್ದಿಮೆ ಕಾರ್ಮಿಕರು ಕಾರ್ಖಾನೆಯ ಪುನರಾರಂಭಕ್ಕಾಗಿ ಅಣ್ಣಾ ಅವರ ಉಪವಾಸ ಸತ್ಯಾಗ್ರಹದ ಮಾರ್ಗವನ್ನು ತುಳಿದಿದ್ದಾರೆ.

ಉದ್ದಿಮೆಯಲ್ಲಿ ಬಹುತೇಕ ಮಹಿಳಾ ಕಾರ್ಮಿಕರೇ ಇದ್ದು, ಮೊರಾಂಗ್ ಜಿಲ್ಲೆಯಲ್ಲಿರುವ ಸೂರ್ಯ ನೇಪಾಳ ಜವಳಿ ಕಾರ್ಖಾನೆ ಎದುರು ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.  ಮಾವೋವಾದಿಗಳ ದಾಳಿಯ ನಂತರ ಕಳೆದ ತಿಂಗಳು ಉದ್ದಿಮೆಯನ್ನು ಮುಚ್ಚಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.