ನೆಪಿಡಾ (ಮ್ಯಾನ್ಮಾರ್): `ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಸಿದ್ಧ' ಎಂದು ಮ್ಯಾನ್ಮಾರ್ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಗುರುವಾರ ಘೋಷಿಸಿದ್ದಾರೆ.
ಈಗಿರುವ ಸಂವಿಧಾನದ ಪ್ರಕಾರ ಪತಿ, ಪತ್ನಿ ಅಥವಾ ಮಕ್ಕಳು ವಿದೇಶಿ ಪ್ರಜೆಗಳಾಗಿದ್ದಲ್ಲಿ ಅಂಥ ವ್ಯಕ್ತಿಗೆ ಅಧ್ಯಕ್ಷರಾಗುವ ಅವಕಾಶ ಇರುವುದಿಲ್ಲ.
ತಮ್ಮ ಪತಿ ಬ್ರಿಟನ್ ಮೂಲದವರಾಗಿದ್ದರಿಂದ ಮ್ಯಾನ್ಮಾರ್ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಸೂಕಿ ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.