ADVERTISEMENT

ಅಪರೂಪದ ಸಸ್ತನಿ ಜನನ

ವ್ರೋಕ್ಲಾ ಪ್ರಾಣಿ ಸಂಗ್ರಹಾಲಯದಲ್ಲಿ ಸಂಭ್ರಮ

ಏಜೆನ್ಸೀಸ್
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಅಪರೂಪದ ಸಸ್ತನಿ ಜನನ
ಅಪರೂಪದ ಸಸ್ತನಿ ಜನನ   

ವಾರ್ಸಾ: ಪೋಲೆಂಡ್‌ನ ವ್ರೋಕ್ಲಾ ಪ್ರಾಣಿ ಸಂಗ್ರಹಾಲಯದಲ್ಲಿ ಕರಡಿಯನ್ನು ಹೋಲುವ ಸಸ್ತನಿಯೊಂದು ಮರಿಗೆ ಜನ್ಮ ನೀಡಿದೆ. ಕಾಂಗರೂಗಳ ರೀತಿ ಹೊಟ್ಟೆಯ ಹೊರಭಾಗದ ಚೀಲದಲ್ಲಿ ಮರಿಯನ್ನು ಇಟ್ಟುಕೊಳ್ಳುವ ಪ್ರಭೇದದ ಈ ಸಸ್ತನಿಯು ಪ್ರಾಣಿ ಸಂಗ್ರಹಾಲಯವೊಂದರಲ್ಲಿ ಮರಿ ಹಾಕಿರುವುದು ಇದೇ ಮೊದಲು ಎಂದು ಪ್ರಾಣಿಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಯಿಯ ಚೀಲದಲ್ಲಿ ಮರಿಯ ಚಲನವಲನವನ್ನು ಇಲ್ಲಿನ ಸಿಬ್ಬಂದಿ ಗಮನಿಸಿದ್ದಾರೆ. ಆರಂಭದ ದಿನಗಳಲ್ಲಿ ಮರಿಯು ತಾಯಿಯ ಚೀಲದಲ್ಲೇ ಇರುತ್ತದೆ. ತಾಯಿಯು ಮರಿಯನ್ನು ಚೆನ್ನಾಗಿ ಆರೈಕೆ ಮಾಡುತ್ತಿದ್ದು, ಯಾರೂ ಇಲ್ಲದ ಜಾಗದಲ್ಲಿ ಇರಿಸಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಈ ಪ್ರಭೇದವನ್ನು ಸಂರಕ್ಷಿಸುವ ಉದ್ದೇಶದಿಂದ ಜಗತ್ತಿನ ನಾಲ್ಕು ಪ್ರಾಣಿ ಸಂಗ್ರಹಾಲಯಗಳಲ್ಲಿ 13 ಸಸ್ತನಿಗಳನ್ನು ಇರಿಸಲಾಗಿತ್ತು. ಆದರೆ ಯಾವುವೂ ಮರಿ ಹಾಕಿರಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.