ADVERTISEMENT

ಅಪಹೃತ ಭಾರತೀಯನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಮಸ್ಕತ್‌ (ಪಿಟಿಐ): ಮಸ್ಕತ್‌ನಿಂದ 200 ಕಿಲೋ ಮೀಟರ್‌ ದೂರದಲ್ಲಿರುವ ಸೋಹರ್‌ ಪಟ್ಟಣದಿಂದ ಕಳೆದ ವಾರ ಅಪಹರಣಗೊಂಡಿದ್ದ  ಭಾರತೀಯನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರುವ ಒಮನ್‌ಪೊಲೀಸರು ಇಬ್ಬರು ಪಾಕಿಸ್ತಾನಿಯರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಸೋಮವಾರ ಬಂಧಿಸಿದ್ದಾರೆ.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿ­ಗಳೊಂದಿಗೆ ಸತತ ಸಂಪರ್ಕ ಸಾಧಿಸಿತ್ತು. ಸೋಮವಾರ ಒಮನ್‌ ಪೊಲೀಸರು ಭಾರತೀಯನನ್ನು ರಕ್ಷಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಪಹರಣಕ್ಕೊಳಗಾದವನನ್ನು ಕೇರಳದ ಹನೀಫ್‌ ಎಂದು ಗುರುತಿಸಲಾಗಿದ್ದು, ಈತನ ಬಿಡುಗಡೆಗಾಗಿ ಅಪಹರಣಕಾರರು ಅಪಾರ ಮೊತ್ತದ ಹಣ  ಬೇಡಿಕೆ ಇಟ್ಟಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಈತನ ಬಿಡುಗಡೆಗೆ ಹಣದ ಬೇಡಿಕೆಯಿಟ್ಟ ಅಪಹರಣಕಾರರು ಉರ್ದು ಭಾಷಿಕರಾಗಿದ್ದರು’ ಎಂದು ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.