ವಾಷಿಂಗ್ಟನ್(ಪಿಟಿಐ): ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಆರು ಜನ ಬಲಿಯಾದ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದಿದೆ.
ನಂತರ ಕಾಲೇಜು ಗ್ರಂಥಾಲಯದಲ್ಲಿ ಪೊಲೀಸರು ಈತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳಕ್ಕೆ ಮೂರು ಮೈಲು ದೂರದಲ್ಲಿ ಈ ಘಟನೆ ನಡೆದಿದೆ.
`ಸುಮಾರು 25ರಿಂದ 30ವರ್ಷ ವಯಸ್ಸಿನ ಬಂದೂಕುಧಾರಿ ಕಪ್ಪುಬಣ್ಣದ ವಸ್ತ್ರಧರಿಸಿದ್ದ. ಮೇಲ್ನೋಟಕ್ಕೆ ಆತ ಗುಂಡುನಿರೋಧಕ ಜಾಕೆಟ್ ಹಾಕಿಕೊಂಡಿದ್ದಂತೆ ಕಾಣುತಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ' ಎಂದು ಪೊಲೀಸ್ ಮುಖ್ಯಸ್ಥ ಜಾಕ್ವೆಲಿನ್ ಸೀ ಬ್ರೂಕ್ಸ್ ಹೇಳಿದ್ದಾರೆ.
`ಘಟನೆಯಲ್ಲಿ ಮೃತಪಟ್ಟವರೆಲ್ಲ ಮಹಿಳೆಯರು. ಇಬ್ಬರ ಸ್ಥಿತಿ ಗಂಭೀರವಾಗಿದೆ'ಎಂದು ಸ್ಥಳೀಯ ಮಾಧ್ಯಮವೊಂದು ಹೇಳಿದೆ. `ಮೋನಿಕಾ ಕಾಲೇಜು ಸೇರಿದಂತೆ ನಗರದಲ್ಲಿ ಒಟ್ಟು ಆರು ಕಡೆ ಗುಂಡಿನ ದಾಳಿ ನಡೆದಿದೆ' ಎಂದು ಸೀ ಬ್ರೂಕ್ಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.