ADVERTISEMENT

ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ಇಳಿಕೆ

ಏಜೆನ್ಸೀಸ್
Published 5 ಮೇ 2018, 19:16 IST
Last Updated 5 ಮೇ 2018, 19:16 IST

ವಾಷಿಂಗ್ಟನ್‌ (ಎಎಫ್‌ಪಿ): ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ 17 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟವಾದ ಶೇ 3.9ಕ್ಕೆ ಇಳಿಕೆಯಾಗಿದೆ.

ದೇಶದ ಉದ್ದಿಮೆಗಳು ಪ್ರಸಕ್ತ ತಿಂಗಳು 1.64 ಲಕ್ಷ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ. ಮಾರುಕಟ್ಟೆ ತಜ್ಞರ ಪ್ರಕಾರ 1.90 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಏಪ್ರಿಲ್‌  ತಿಂಗಳಿನಲ್ಲಿ ಕಡಿಮೆಯಾಗಿದೆ ಎಂದು ಕಾರ್ಮಿಕ ಇಲಾಖೆ ಹೇಳಿದೆ.

ಟೆಕ್ಸಾಸ್‌ನಲ್ಲಿ ನಡೆದ ರಾಷ್ಟ್ರೀಯ ರೈಫಲ್ಸ್‌ ಅಸೋಸಿಯೇಶನ್‌ ಸಮಾವೇಶದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ಡೊನಾಲ್ಡ್‌ ಟ್ರಂ‍ಪ್‌, ‘ಈ ವಿದ್ಯಮಾನ ದೇಶದ ಸದೃಢ ಆರ್ಥಿಕತೆಯನ್ನು ಸಾರುತ್ತದೆ’ ಎಂದು ಬಣ್ಣಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.