ADVERTISEMENT

ಅಮೆರಿಕದಲ್ಲಿ ಮದುವೆ ಪ್ರಮಾಣ ಇಳಿಮುಖ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ವಾಷಿಂಗ್ಟನ್(ಪಿಟಿಐ): `ಅಮೆರಿಕದಲ್ಲಿ ಮದುವೆ ಪ್ರಮಾಣ ಶತಮಾನದಲ್ಲೇ ಅತ್ಯಂತ ಕಡಿಮೆಯಾಗಿದೆ' ಎಂದು ಹೊಸ ಅಧ್ಯಯನ ತಿಳಿಸಿದೆ.

ಸದ್ಯ ಈ ಪ್ರಮಾಣ ಶೇ 31.01 ರಷ್ಟಿದೆ (ಸಾವಿರ ಮಹಿಳೆಯರಲ್ಲಿ 31 ಜನ). `ಹೆಚ್ಚಿನ ಮಹಿಳೆಯರು ಮದುವೆಯಿಂದ ವಿಮುಖರಾಗಿರುವುದು ಹಾಗೂ ತಡವಾಗಿ ಮದುವೆಯಾಗುವುದು ಇದಕ್ಕೆ ಕಾರಣ' ಎಂದು ಬೌಲಿಂಗ್ ಗ್ರೀನ್ ಸ್ಟೇಟ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಕುಟುಂಬ ಹಾಗೂ ವಿವಾಹ ಕೇಂದ್ರದ ಅಧ್ಯಯನ ಹೇಳಿದೆ.

`1920ರಲ್ಲಿ ಮದುವೆ ಪ್ರಮಾಣ ಶೇ92.3 ರಷ್ಟಿತ್ತು.1970ರಿಂದ ಈ ಪ್ರಮಾಣ ಶೇ60ರಷ್ಟು ಇಳಿಕೆಯಾಗಿದೆ' ಎಂದು ಅಧ್ಯಯನ ಹೇಳಿದೆ.

`ವಿವಾಹ ಬಂಧನ ಕಡ್ಡಾಯವಲ್ಲ. ಆಯ್ಕೆಗೆ ಬಿಟ್ಟಿದ್ದು. ಹೆಚ್ಚಿನ ಜೋಡಿಗಳು ಮದುವೆಯ ಬದಲು  “ಸಹಜೀವನ”(ಲಿವ್ ಇನ್)ನಡೆಸುತ್ತಾರೆ. ಮತ್ತೆ ಕೆಲವರು ಒಂಟಿ ಜೀವನ ಇಷ್ಟಪಡುತ್ತಾರೆ' ಎಂದು ಕೇಂದ್ರದ ಸಹ ನಿರ್ದೇಶಕ ಡಾ. ಸೂಸನ್ ಬ್ರೌನ್ ಹೇಳುತ್ತಾರೆ. ಮದುವೆ ಪ್ರಮಾಣ ಇಳಿಕೆಯಾದರೆ ವಿಚ್ಛೇದಿತರ ಸಂಖ್ಯೆ ಏರುತ್ತಿದೆ. 1920ರಲ್ಲಿ ಶೇ ಒಂದಕ್ಕಿಂತ ಕಡಿಮೆ ಮಹಿಳೆಯರು ವಿಚ್ಛೇದನ ಪಡೆಯುತ್ತಿದ್ದರೆ ಈಗ ಈ ಪ್ರಮಾಣ ಶೇ 15ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.