ADVERTISEMENT

ಅಮೆರಿಕ ಕ್ಯಾಪಿಟಲ್ ಮೇಲಿನ ಧ್ವಜ ಪಡೆದ ಭಾರತೀಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಇಲ್ಲಿನ `ಕ್ಯಾಪಿಟಲ್~ (ಸಂಸತ್ ಭವನ) ಮೇಲೆ ಹಾರಿಸುವ ಅಮೆರಿಕದ ರಾಷ್ಟ್ರ ಧ್ವಜವನ್ನು ಪಡೆದ ಶ್ರೇಯಕ್ಕೆ ಭಾರತದ ಚೆನ್ನೈ ಮೂಲದ ಅರುಣಾಚಲ ರಾಜ್ ನಾಗಾರ್ಜುನ್ ಅವರು ಪಾತ್ರರಾಗಿದ್ದಾರೆ.

50 ವರ್ಷಗಳ ಹಿಂದೆ ಅಮೆರಿಕಕ್ಕೆ ವಲಸೆ ಬಂದ ನಾಗಾರ್ಜುನ್ ಅವರು, ಇಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಈ ಧ್ವಜವನ್ನು ನೀಡಲಾಗಿದೆ.

`ಕ್ಯಾಪಿಟಲ್~ನಲ್ಲಿ ನವೆಂಬರ್ 9ರಂದು ನಡೆದ ಸಮಾರಂಭದಲ್ಲಿ ಟೆಕ್ಸಾಸ್‌ನ ಸಂಸದ ಲಾಮರ್ ಸ್ಮಿತ್ ಅವರು ಈ ಧ್ವಜವನ್ನು ನಾಗರ್ಜುನ್ ಅವರಿಗೆ ನೀಡಿದರು.

`ಕ್ಯಾಪಿಟಲ್~ ಮೇಲೆ ಪ್ರತಿ ದಿವಸ ಹಾರಿಸುವ ರಾಷ್ಟ್ರ ಧ್ವಜವನ್ನು ಗಣ್ಯರಿಗೆ ನೀಡಲಾಗುತ್ತದೆ. ಈ ಧ್ವಜ ಪಡೆಯುವುದು ಪ್ರತಿಷ್ಠೆಯ ವಿಚಾರವೂ ಆಗಿದೆ.

ವಿಶೇಷವೆಂದರೆ 1962ರ ನವೆಂಬರ್ 9ರಂದೇ ನಾಗಾರ್ಜುನ್ ಅವರು ಅಮೆರಿಕಕ್ಕೆ ಬಂದಿದ್ದರು. 22 ದಿವಸಗಳ ಕಾಲ ಹಡಗಿನಲ್ಲಿ ಪಯಣಿಸಿ ಅಮೆರಿಕೆಗೆ  ಬಂದಿಳಿದಾಗ ನಾಗಾರ್ಜುನ್ ಅವರ ಕಿಸೆಯಲ್ಲಿ ಇದ್ದದ್ದು ಬರೀ ಎಂಟು ಡಾಲರ್. ಭೌತಶಾಸ್ತ್ರದಲ್ಲಿ ಪಿಎಚ್.ಡಿ ಪದವಿಯನ್ನು ಇಲ್ಲಿನ ವಿವಿಯಿಂದ ಪಡೆದ ಅವರು ಈ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲದೇ ಅವರು ಭಾರತದ ಸಾಂಸ್ಕೃತಿಕ ರಾಯಭಾರಿಯೂ ಆಗಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.