ADVERTISEMENT

ಅಮೆರಿಕ ಸಂಸದ ಸ್ಟೀವ್ ಸ್ಕಾಲೈಸ್ ಮೇಲೆ ಗುಂಡಿನ ದಾಳಿ

ಪಿಟಿಐ
Published 14 ಜೂನ್ 2017, 19:33 IST
Last Updated 14 ಜೂನ್ 2017, 19:33 IST
ಅಮೆರಿಕ ಸಂಸದ ಸ್ಟೀವ್ ಸ್ಕಾಲೈಸ್ ಮೇಲೆ ಗುಂಡಿನ ದಾಳಿ
ಅಮೆರಿಕ ಸಂಸದ ಸ್ಟೀವ್ ಸ್ಕಾಲೈಸ್ ಮೇಲೆ ಗುಂಡಿನ ದಾಳಿ   

ವಾಷಿಂಗ್ಟನ್: ವರ್ಜೀನಿಯದ ಅಲೆಕ್ಸಾಂಡ್ರಿಯಾದಲ್ಲಿ ಬೇಸ್ ಬಾಲ್ ಪಂದ್ಯದ ಅಭ್ಯಾಸ ನಡೆಸುತ್ತಿದ್ದ ರಿಪಬ್ಲಿಕನ್‌ ಪಕ್ಷದ ಸಂಸದ ಸ್ಟೀವ್ ಸ್ಕಾಲೈಸ್ (51) ಮೇಲೆ ಗುಂಡಿನ ದಾಳಿ ನಡೆದಿದೆ.

ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.

ಮತ್ತೊಬ್ಬ ಸಂಸದ ರೋಜರ್ ವಿಲಿಯಮ್ ಎಂಬುವವರೂ ಗಾಯಗೊಂಡಿದ್ದಾರೆ.

ಆದರೆ ಅವರು ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೋ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂಬುದು ತಿಳಿದುಬಂದಿಲ್ಲ.

ದಾಳಿ ನಡೆಸಿದ ವ್ಯಕ್ತಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.