ADVERTISEMENT

ಅಮೆರಿಕ ಸೆನೆಟ್‍ಗೆ ಆಯ್ಕೆಯಾದ ಭಾರತೀಯ ಸಂಜಾತರು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2016, 11:03 IST
Last Updated 9 ನವೆಂಬರ್ 2016, 11:03 IST
ಅಮೆರಿಕ ಸೆನೆಟ್‍ಗೆ ಆಯ್ಕೆಯಾದ ಭಾರತೀಯ ಸಂಜಾತರು
ಅಮೆರಿಕ ಸೆನೆಟ್‍ಗೆ ಆಯ್ಕೆಯಾದ ಭಾರತೀಯ ಸಂಜಾತರು   

ವಾಷಿಂಗ್ಟನ್: ಅಮೆರಿಕ ಸೆನೆಟ್‍ಗೆ ಭಾರತ ಮೂಲದ ಕಮಲಾ ಹ್ಯಾರಿಸ್ ಮತ್ತು ರಾಜಾ ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ಸೆನೆಟ್‍ಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕಮಲಾ ಪಾತ್ರರಾಗಿದ್ದಾರೆ. ಕಮಲಾ ಮತ್ತು ಕೃಷ್ಣಮೂರ್ತಿ ಇಬ್ಬರೂ ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿದ್ದಾರೆ.

ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್‌ ಆಗಿದ್ದ 51ರ ಹರೆಯದ ಕಮಲಾ, ಲೊರೆಟ್ಟಾ ಸಾಂಕೆಜ್‌ ಅವರನ್ನು ಪರಾಭವಗೊಳಿಸಿದ್ದಾರೆ.
ಕಮಲಾ ಅವರು ಕ್ಯಾಲಿಫೋರ್ನಿಯಾದ ಓಕ್ಲೆಂಡ್‌ನಲ್ಲಿ ಜನಿಸಿದವರು. ಚೆನ್ನೈ ಮೂಲದವರಾದ ಅವರ ತಾಯಿ ಡಾ. ಶ್ಯಾಮಲಾ ಗೋಪಾಲನ್  1960ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಕಮಲಾ ಅವರ ತಂದೆ ಜಮೈಕಾ ಮೂಲದ ಅಮೆರಿಕನ್ ಪ್ರಜೆ.

40ರ ಹರೆಯದ ರಾಜಾ ಕೃಷ್ಣಮೂರ್ತಿ ಇಲಿನಾಯ್ ನಿಂದ ಸೆನೆಟ್‍ಗೆ ಸ್ಪರ್ಧಿಸಿದ್ದರು.  ನವದೆಹಲಿ ಮೂಲದವರಾದ ಕೃಷ್ಣಮೂರ್ತಿ ಈ ವರ್ಷ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದರು.

ADVERTISEMENT

ಭಾರತದಲ್ಲಿ ಜನಿಸಿದ್ದರೂ ರಾಜಾ ಅವರು ಬೆಳೆದದ್ದು, ಓದಿದ್ದು ಅಮೆರಿಕದಲ್ಲೇ. ವಕೀಲ, ಉದ್ಯಮಿ, ಇಂಜಿನಿಯರ್ ಆಗಿಯೂ ಕೃಷ್ಣಮೂರ್ತಿ ಕೆಲಸ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.