ADVERTISEMENT

ಅಲ್‌ಖೈದಾಕ್ಕೆ ಜವಾಹಿರಿ ನೂತನ ಮುಖ್ಯಸ್ಥ?

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ವಾಷಿಂಗ್ಟನ್ (ಪಿಟಿಐ): ಅಲ್‌ಖೈದಾ ಮುಖ್ಯಸ್ಥ ಲಾಡೆನ್ ಅಮೆರಿಕ ದಾಳಿಯಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಂಘಟನೆಯ ಎರಡನೇ ನಾಯಕ ಏಮನ್ ಅಲ್ ಜವಾಹಿರಿ ಉತ್ತರಾಧಿಕಾರಿಯಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.ಆದರೆ ಈಜಿಪ್ಟ್ ಮೂಲದ ವೈದ್ಯನಾಗಿರುವ ಜವಾಹಿರಿ ಸಂಘಟನೆಯಲ್ಲಿ ಲಾಡೆನ್ ಹೊಂದಿದ್ದ ಹಿಂಬಾಲಕರ ನಿಯತ್ತು ಗಳಿಸುವುದು ಕಷ್ಟಸಾಧ್ಯ ಎನ್ನಲಾಗಿದೆ.

ಅಮೆರಿಕ ಪಡೆಗಳು ಲಾಡೆನ್ ಬೆನ್ನಿಗೆ ಬಿದ್ದ ಮೇಲೆ ಆತನ ಬೆಂಗಾವಲಾಗಿ ಜವಾಹಿರಿ ಕಾರ್ಯನಿರ್ವಹಿಸುತ್ತಿದ್ದ. ಹಾಗಾಗಿ ಲಾಡೆನ್ ಉತ್ತರಾಧಿಕಾರಿಯಾಗಿ ಜವಾಹಿರಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.