ADVERTISEMENT

ಅವಿಶ್ವಾಸಮತ ಮಂಡನೆಗೂ ಮುನ್ನ ಸೋಲೊಪ್ಪಿಕೊಂಡ ಸ್ಪೇನ್‌ ಪ್ರಧಾನಿ

ಏಜೆನ್ಸೀಸ್
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಮ್ಯಾಡ್ರಿಡ್‌: ತನ್ನ ವಿರುದ್ಧ ಅವಿಶ್ವಾಸಮತ ನಿರ್ಣಯ ಮಂಡನೆಗೂ ಮುನ್ನವೇ ಸ್ಪೇನ್‌ನ ಪ್ರಧಾನಿ ಮಾರಿಯಾನೊ ರಜೋಯ್‌ ಸೋಲೊಪ್ಪಿಕೊಂಡಿದ್ದಾರೆ. ಹೀಗಾಗಿ ವಿರೋಧ ಪಕ್ಷದ ನಾಯಕ ಪೆಡ್ರೊ ಸಾಂಚೇಜ್‌ ಪ್ರಧಾನಿ ಹುದ್ದೇಗೇರಲು ಹಾದಿ ಸುಗಮವಾದಂತಾಗಿದೆ.

ಸಂಸತ್‌ನಲ್ಲಿ ವಿದಾಯ ಭಾಷಣ ಮಾಡಿದ ಮಾರಿಯಾನೊ, ‘ಸ್ಪೇನ್‌ನ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲು ನನಗೆ ಅವಕಾಶ ಸಿಕ್ಕಿದ ದೊಡ್ಡ ಗೌರವ’ ಎಂದರು.

ನಿರ್ಗಮಿತ ಪ್ರಧಾನಿ ಮರಿಯಾನೊ ಪ್ರತಿನಿಧಿಸುವ ಕನ್ಸರ್ವೇಟಿವ್‌ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಸಂಸದರನ್ನು ಉದ್ದೇಶಿಸಿ ಮಾತನಾಡಿದ ಸಾಂಚೇಜ್, ‘ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹೊಸ ಪುಟವೊಂದರಲ್ಲಿ ಸಹಿ ಹಾಕುತ್ತಿದ್ದೇವೆ’ ಎಂದರು.

ADVERTISEMENT

‘ಹಿಂಬಾಗಿಲಿನ ಮೂಲಕ ಪ್ರಧಾನಿ ಹುದ್ದೆಗೇರುವ ವ್ಯಕ್ತಿಯನ್ನು ಮೊದಲ ಬಾರಿಗೆ ನಾವು ನೋಡಬಹುದು’ ಎಂದು ಕನ್ಸರ್ವೇಟಿವ್‌ ಪಕ್ಷದ ರಫೇಲ್ ಹನ್ಯಾಂಡೋ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.