ADVERTISEMENT

ಅಸಾಂಜ್‌ಗೆ ಆಶ್ರಯ: ಈಕ್ವೆಡಾರ್‌ಗೆ ದಕ್ಷಿಣ ಅಮೆರಿಕ ಬೆಂಬಲ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 19:30 IST
Last Updated 20 ಆಗಸ್ಟ್ 2012, 19:30 IST

ಕ್ವಿಟೊ (ಈಕ್ವೆಡಾರ್) (ಐಎಎನ್‌ಎಸ್): ಬಂಧನ ಭೀತಿ ಎದುರಿಸುತ್ತಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್‌ಗೆ ಆಶ್ರಯ ನೀಡಿರುವ ಈಕ್ವೆಡಾರ್‌ಗೆ ದಕ್ಷಿಣ ಅಮೆರಿಕ ರಾಷ್ಟ್ರಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.

ಲಂಡನ್‌ನಲ್ಲಿ ಈಕ್ವೆಡಾರ್‌ನ ದೂತಾವಾಸ ಕಚೇರಿಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಸಿರುವ ಬ್ರಿಟನ್ ವರ್ತನೆಯನ್ನು ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.