ADVERTISEMENT

ಅಸ್ಸಾಂಜ್ ಗಡಿಪಾರು: ಕೋರ್ಟ್ ತೀರ್ಪು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 16:15 IST
Last Updated 24 ಫೆಬ್ರುವರಿ 2011, 16:15 IST

ಲಂಡನ್ (ಐಎಎನ್‌ಎಸ್): ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ವಿಕಿಲೀಕ್ಸ್ ಸಂಸ್ಥಾಪಕ ಆಸ್ಟ್ರೇಲಿಯಾದ ಜೂಲಿಯನ್ ಅಸ್ಸಾಂಜ್ ಅವರನ್ನು ಸ್ವೀಡನ್‌ಗೆ ಗಡಿಪಾರು ಮಾಡುವಂತೆ ಇಲ್ಲಿನ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಇಬ್ಬರು ಮಹಿಳೆಯರು ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ಅಸ್ಸಾಂಜ್ ನಿರಾಕರಿಸಿದ್ದರು. ಅಲ್ಲದೆ ಬಂಧಿತರಾದ ಮತ್ತು ಡಿಸೆಂಬರ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರದಿಂದಲೂ ಅಸ್ಸಾಂಜ್ ಗಡಿಪಾರು  ಆಗುವುದರ ವಿರುದ್ಧ ಹೋರಾಟ ನಡೆಸಿದ್ದರು.

ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದ್ದು  ಅಸ್ಸಾಂಜ್ ಗಡಿಪಾರನ್ನು ಇದು ಮತ್ತಷ್ಟು ವಿಳಂಬಗೊಳಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.