ADVERTISEMENT

ಆರ್ಥಿಕ ಸುಧಾರಣಾ ಕ್ರಮ: ಭಾರತವನ್ನು ಹೊಗಳಿದ ಜಿ20 ರಾಷ್ಟ್ರಗಳು

ಪಿಟಿಐ
Published 9 ಜುಲೈ 2017, 14:09 IST
Last Updated 9 ಜುಲೈ 2017, 14:09 IST
ಹ್ಯಾಂಬರ್ಗ್‌ನಲ್ಲಿ ನಡೆದಿದ್ದ ಜಿ–20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸದಸ್ಯರ ರಾಷ್ಟ್ರಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವುದು
ಹ್ಯಾಂಬರ್ಗ್‌ನಲ್ಲಿ ನಡೆದಿದ್ದ ಜಿ–20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸದಸ್ಯರ ರಾಷ್ಟ್ರಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವುದು   

ಹ್ಯಾಂಬರ್ಗ್‌: ಸುಸ್ಥಿರ ಆರ್ಥಿಕ ಬೆಳವಣಿಗೆ, ನವೋದ್ಯಮ ನಿಧಿ (ಸ್ಟಾರ್ಟಪ್ ಫಂಡಿಂಗ್) ಒದಗಿಸುವಿಕೆ, ಉದ್ಯಮಕ್ಕೆ ಉತ್ತೇಜನ ಹಾಗೂ ಕಾರ್ಮಿಕ ಸುಧಾರಣೆಗೆ ಭಾರತ ಕೈಗೊಂಡಿರುವ ಕ್ರಮಗಳನ್ನು ಜಿ20 ರಾಷ್ಟ್ರಗಳು ಶ್ಲಾಘಿಸಿವೆ.

‘ಹಣಕಾಸು ಕ್ಷೇತ್ರದಲ್ಲಿ, ವಿದ್ಯುನ್ಮಾನ ಅಥವಾ ವಿನಿಮಯ ಮಾರುಕಟ್ಟೆಯ ಮೂಲಕ ಭಾರತವು ಸರ್ಕಾರಿ ಬಾಂಡ್‌ಗಳ ವಾಯಿದಾ ವಹಿವಾಟು ಜನಪ್ರಿಯಗೊಳಿಸುತ್ತಿದೆ’ ಎಂದು ಹ್ಯಾಂಬರ್ಗ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಸಿದ್ಧಪಡಿಸಲಾದ ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ನವೋದ್ಯಮದ (ಸ್ಟಾರ್ಟಪ್) ಮೂಲಕ ಭಾರತವು ಬಾಹ್ಯ ವಾಣಿಜ್ಯ ಸಾಲ (ಇಸಿಬಿ) ಒದಗಿಸುತ್ತಿದೆ. ತನ್ಮೂಲಕ ಉದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಜಿ20 ಸದಸ್ಯ ರಾಷ್ಟ್ರಗಳು ಈ ವರ್ಷ ಕೈಗೊಂಡಿರುವ ಕ್ರಮಗಳಲ್ಲಿ ಇವುಗಳೂ ಸೇರಿವೆ. ಕಾರ್ಮಿಕರಿಗೆ ಭದ್ರತೆ, ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಉತ್ತೇಜನ ಮತ್ತಿತರ ಕ್ರಮಗಳ ಮೂಲಕ ಭಾರತವು ಕಾರ್ಮಿಕ ಸುಧಾರಣೆ ಜಾರಿಗೆ ತರುತ್ತಿದೆ ಎಂದು ಎಂದು ಕಾರ್ಯಸೂಚಿಯಲ್ಲಿ ಹೇಳಲಾಗಿದೆ.

ADVERTISEMENT

ಉದ್ಯಮಕ್ಕೆ ಉತ್ತೇಜನ ನೀಡುವ ರಾಷ್ಟ್ರಗಳ ವಿಶ್ವಬ್ಯಾಂಕ್‌ ಪಟ್ಟಿಯಲ್ಲಿ ಕಳೆದ ವರ್ಷ ಭಾರತವು 130ನೇ ಸ್ಥಾನದಲ್ಲಿತ್ತು. ಇದನ್ನು 50ರ ಒಳಗಿರುವಂತೆ ಮಾಡುವುದೇ ನಮ್ಮ ಗುರಿ ಎಂದು ಎನ್‌ಡಿಎ ಸರ್ಕಾರ ಕಳೆದ ವರ್ಷ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.