ADVERTISEMENT

ಆಸ್ಟ್ರೇಲಿಯಾ: ಭಾರತೀಯ ವಿದ್ಯಾರ್ಥಿನಿಯ ಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 7:30 IST
Last Updated 14 ಮಾರ್ಚ್ 2011, 7:30 IST

 ಮೆಲ್ಬೋರ್ನ್  (ಪಿಟಿಐ): ಭಾರತೀಯ ಮೂಲದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ನಂತರ ಅವಳನ್ನು ಕೊಂದು, ದೇಹವನ್ನು ಸೂಟ್‌ಕೇಸ್ ಒಂದರಲ್ಲಿ ಬಚ್ಚಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಶುಕ್ರವಾರ ಇಲ್ಲಿನ ಮೆಡ್ವಾಬ್ಯಾಂಕ್ ಪಾರ್ಕ್ ಬಳಿಯ ನೀರಿನ ಕಾಲುವೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ಯುವತಿಯ ಶವ ಬಚ್ಚಿಟ್ಟ ಸೂಟ್‌ಕೇಸ್ ದೊರೆತಿದೆ ಎಂದು ಸ್ಥಳೀಯ ಪೊಲೀಸರು ನೀಡಿದ್ದಾರೆ. 

 ಕೊಲೆಯಾದ ಯುವತಿಯನ್ನು ತೊಷಾ ಠಕ್ಕರ್ (24) ಎಂದು ಗುರುತಿಸಲಾಗಿದೆ. ಕೊನೆಯ ಬಾರಿ ಬುಧವಾರ ಅವಳನ್ನು ಕಂಡವರಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆ ವರದಿಯನ್ನು ಕಾಯುತ್ತಿದ್ದು, ವರದಿ ಬಂದ ನಂತರ ಅವಳನ್ನು ಹೇಗೆ ಹತ್ಯೆಮಾಡಲಾಗಿದೆ ಎಂಬುದು ಗೊತ್ತಾಗಬಹುದೆಂದು ಅವರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನಿಯಲ್ ಸ್ಟ್ಯಾನಿ ರೆಜಿನಾಲ್ಡ್ (19) ಎಂಬುವವನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT