
ಪ್ರಜಾವಾಣಿ ವಾರ್ತೆಮೆಲ್ಬರ್ನ್ (ಪಿಟಿಐ): ಪ್ರಸ್ತುತ ಅಮೆರಿಕ ಆಡಳಿತದೊಂದಿಗೆ ಕಲಹಕ್ಕಿಳಿದಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸ್ಸಾಂಜ್ ಅವರು ಆಸ್ಟ್ರೇಲಿಯಾ ಸೆನೆಟ್ ಸ್ಥಾನಕ್ಕೆ ಸ್ಪರ್ಧಿಸಲು ಯೋಜಿಸಿದ್ದಾರೆ.
ಆಸ್ಟ್ರೇಲಿಯಾ ನಾಗರಿಕರಾದ 40 ವರ್ಷದ ಅಸ್ಸಾಂಜ್ ಅವರನ್ನು ಸ್ವೀಡನ್‌ನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಬ್ರಿಟನ್ ಸರ್ಕಾರವು ಬಂಧಿಸಿದೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಸ್ವೀಡನ್‌ಗೆ ಹಸ್ತಾಂತರ ಮಾಡುವ ಸಾಧ್ಯತೆಗಳ ನಡುವೆಯೇ ಅವರು ಆಸ್ಟ್ರೇಲಿಯಾ ಸೆನೆಟ್‌ಗೆ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.