ADVERTISEMENT

ಇಂದು ಭೂತಾನ್ ದೊರೆ ವಿವಾಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಥಿಂಪು (ಪಿಟಿಐ): ಭೂತಾನ್‌ನ ಖ್ಯಾತ ದೊರೆ ಜಿಗ್ಮೆ  ಕೇಸರ್ ನಮ್‌ಗೇಲ್ ವಾಂಗ್‌ಚುಕ್ ಅವರು ಭಾರತದಲ್ಲಿ ವ್ಯಾಸಂಗ ಮಾಡಿದ ಯುವತಿ ಜೆತ್ಸುನ್ ಪೆಮಾ ಅವರೊಂದಿಗೆ ಗುರುವಾರ ಮದುವೆಯಾಗಲಿದ್ದಾರೆ.

ಭೂತಾನ್‌ದಂಥ ಸಣ್ಣ ರಾಷ್ಟ್ರದ ಇತಿಹಾಸದಲ್ಲಿ ಈ ವಿವಾಹವನ್ನು ಚರಿತ್ರಾರ್ಹ ಘಟನೆ ಎಂದೇ  ಪರಿಗಣಿಸಲಾಗಿದೆ.
ಆಕ್ಸ್‌ಫರ್ಡ್ ವಿ.ವಿಯಲ್ಲಿ ಓದಿರುವ 31 ವರ್ಷದ ದೊರೆಯು ತಮಗಿಂತ 10 ವರ್ಷ ಚಿಕ್ಕವಳಾಗಿರುವ ಪೈಲಟ್ ಪುತ್ರಿ ಪೆಮಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಐತಿಹಾಸಿಕ ನಗರ ಪುನಖಾದಲ್ಲಿ ಬೌದ್ಧ ಸಂಪ್ರದಾಯದ ಪ್ರಕಾರ ವೈಭವೋಪೇತ  ಮದುವೆ ಸಮಾರಂಭ ಜರುಗಲಿದೆ.

ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್ ಸೇರಿದಂತೆ 1,500 ಅತಿಥಿಗಳ ಸಮ್ಮುಖದಲ್ಲಿ ಈ ವಿವಾಹ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.