ADVERTISEMENT

ಇಂದು 50ನೇ ವರ್ಷಾಚರಣೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ವಾಷಿಂಗ್ಟನ್ (ಎಎಫ್‌ಪಿ):  ಅಮೆರಿಕದ ಪ್ರಜೆಯೊಬ್ಬ ಮೊದಲ ಬಾರಿಗೆ ಅಂತರಿಕ್ಷದಲ್ಲಿ ಭೂಮಿಗೆ ಸುತ್ತು ಹಾಕಿದ ದಿನದ 50 ವರ್ಷಾಚರಣೆ ಸೋಮವಾರ ನಡೆಯಲಿದೆ.

1962ರ ಫೆಬ್ರುವರಿ 20ರಂದು ಗಗನಯಾನಿ ಜಾನ್ ಗ್ಲೆನ್ ಅವರು 11ನೇ ಯತ್ನದಲ್ಲಿ ಕೇಪ್ ಕ್ಯಾನರಾವಲ್‌ನಿಂದ ಅಟ್ಲಾಸ್ ರಾಕೆಟ್ ಮೂಲಕ ಗಗನಯಾತ್ರೆ ಕೈಗೊಂಡಿದ್ದರು. ಐದು ಗಂಟೆಗಳ ಅವಧಿಯಲ್ಲಿ ಅಟ್ಲಾಸ್ ರಾಕೆಟ್ ನಿರ್ದಿಷ್ಟ ಕಕ್ಷೆಯಲ್ಲಿ ಭೂಮಿಗೆ ಮೂರು ಸುತ್ತು ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.