
ಪ್ರಜಾವಾಣಿ ವಾರ್ತೆಹದಿತ, ಇರಾಕ್ (ಎಎಫ್‌ಪಿ): ಸೇನಾ ಸಮವಸ್ತ್ರದಲ್ಲಿದ್ದ ಶಂಕಿತ ಅಲ್‌ಖೈದಾ ಉಗ್ರಗಾಮಿಗಳು ಇಬ್ಬರು ಅಧಿಕಾರಿಗಳು ಸೇರಿದಂತೆ 26 ಮಂದಿ ಪೊಲೀಸರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಸ್ಥಳೀಯ ಕಾಲಮಾನ ಬೆಳಗಿನ ಜಾವ 2 ಗಂಟೆಗೆ ಈ ಉಗ್ರಗಾಮಿಗಳು ಮೊದಲು ಹದಿತದ ಪೂರ್ವ ಮತ್ತು ಪಶ್ಚಿಮ ಭಾಗಗಳ ಎರಡು ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ಮಾಡಿದರು. ನಂತರ ಇತರ ಕಡೆಗಳಲ್ಲಿ ದಾಳಿ ನಡೆಸಿದರು.
ಇಬ್ಬರು ಪೊಲೀಸ್ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಮಾಡಿದ ಉಗ್ರರು ಅಧಿಕಾರಿಗಳನ್ನು ಮರಣದಂಡನೆ ಶಿಕ್ಷೆ ವಿಧಿಸುವ ರೀತಿಯಲ್ಲೇ ಸಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.