ADVERTISEMENT

ಇರುವೆಗಳ ಹಿಮ್ಮುಖ ಚಲನೆ: ಸೂರ್ಯ, ಸ್ಮರಣಾಶಕ್ತಿ ಬಳಸಿ ಗೂಡಿಗೆ

ಏಜೆನ್ಸೀಸ್
Published 22 ಜನವರಿ 2017, 13:28 IST
Last Updated 22 ಜನವರಿ 2017, 13:28 IST
ಇರುವೆಗಳ ಹಿಮ್ಮುಖ ಚಲನೆ: ಸೂರ್ಯ, ಸ್ಮರಣಾಶಕ್ತಿ ಬಳಸಿ ಗೂಡಿಗೆ
ಇರುವೆಗಳ ಹಿಮ್ಮುಖ ಚಲನೆ: ಸೂರ್ಯ, ಸ್ಮರಣಾಶಕ್ತಿ ಬಳಸಿ ಗೂಡಿಗೆ   

ಲಂಡನ್‌: ತನಗಿಂತಲೂ ಹೆಚ್ಚು ತೂಕ ಮತ್ತು ದೊಡ್ಡ ಗಾತ್ರದ ಆಹಾರ ಪದಾರ್ಥಗಳನ್ನು ಹೊತ್ತು ಹಿಮ್ಮುಖವಾಗಿ ಸಾಗುವ ಇರುವೆಗಳಿಗೆ ಸೂರ್ಯಪಥ ಮತ್ತು ದೃಶ್ಯ ಸ್ಮರಣೆಯೇ ಆಧಾರ.

ಹೊಸ ಅಧ್ಯಯನದ ಪ್ರಕಾರ, ಇರುವೆಗಳಲ್ಲಿನ ಸಾಗುವ ಹಾದಿ ಗುರುತಿಟ್ಟುಕೊಳ್ಳುವ ಕಲೆ ಹಿಂದೆ ತಿಳಿದಿರುವುದಕ್ಕಿಂತೂ ಸೂಕ್ಷ್ಮವಾದುದಾಗಿದೆ.

ವಸ್ತುಗಳನ್ನು ಎಳೆದು ಸಾಗಿಸುವಾಗ ಹಿಂದಕ್ಕೆ ಹೆಜ್ಜೆಯಿಡುವ ಇರುವೆಗಳು ಸೂರ್ಯನ ಪಥವನ್ನು ಗಮನಿಸುತ್ತವೆ. ಹಾಗೂ ಬಂದ ಹಾದಿಯ ದೃಶ್ಯ ಸ್ಮರಣೆಯನ್ನು ಬಳಸಿ ನಿರ್ದಿಷ್ಟ ಜಾಗವನ್ನು ತಲುಪುತ್ತವೆ.

ADVERTISEMENT

ಇಂಗ್ಲೆಂಡ್‌ನ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯ ಸೇರಿದಂತೆ ಇತರೆ ವಿಜ್ಞಾನಿಗಳು 'ಇರುವೆ ಚಲನೆ' ಕುರಿತು ನಡೆಸಿರುವ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಈ ಅಧ್ಯಯನವು ರೋಬೋಟ್‌ ಚಲನಾ ವ್ಯವಸ್ಥೆ ರೂಪಿಸುವಲ್ಲಿ ಸಹಕಾರಿಯಾಗಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.