ADVERTISEMENT

ಇ–ಮೇಲ್ ಸೃಷ್ಟಿಕರ್ತ ರೇ ಟಾಮ್ಲಿನ್‌ಸನ್‌ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2016, 13:08 IST
Last Updated 7 ಮಾರ್ಚ್ 2016, 13:08 IST
Thank you, Ray Tomlinson, for inventing email and putting the @ sign on the map. #RIP— Gmail (@gmail) March 6, 2016
Thank you, Ray Tomlinson, for inventing email and putting the @ sign on the map. #RIP— Gmail (@gmail) March 6, 2016   

ವಾಷಿಂಗ್ಟನ್‌ (ಎಎಫ್‌ಪಿ): 1970ರ ದಶದಲ್ಲಿ ಇ–ಮೇಲ್‌ ಕಂಡುಹಿಡಿದ ಮತ್ತು ಎಲೆಕ್ಟ್ರಾನಿಕ್‌ ಮೆಸೇಜಿಂಗ್‌ ವ್ಯವಸ್ಥೆಯಲ್ಲಿ @ ಸಂಕೇತವನ್ನು ಮೊದಲ ಬಾರಿಗೆ ಬಳಸಿದ ಅಮೆರಿಕ ಮೂಲದ ಕಂಪ್ಯೂಟರ್‌ ಪ್ರೊಗ್ರಾಮರ್‌ ರೇ ಟಾಮ್ಲಿನ್‌ಸನ್‌ ಅವರು ಶನಿವಾರ ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಟಾಮ್ಲಿನ್‌ಸನ್‌ ಅವರು 1971ರಲ್ಲಿ ನೇರ ಎಲೆಕ್ಟ್ರಾನಿಕ್‌ ಮೆಸೇಜಿಂಗ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಅದಕ್ಕೂ ಮೊದಲು ಒಬ್ಬರು ಮತ್ತೊಬ್ಬರಿಗೆ ಇ–ಮೇಲ್‌ ಕಳುಹಿಸಬೇಕಿದ್ದರೆ ಅದು ಸೀಮಿತ ನೆಟ್‌ವರ್ಕ್‌ನಲ್ಲಿ ಮಾತ್ರ ಸಾಧ್ಯವಿತ್ತು. 

‘ನೆಟ್‌ವರ್ಕ್‌ ಕಂಪ್ಯೂಟರ್‌ಗಳ ಆರಂಭಿಕ ದಿನಗಳಲ್ಲಿ ರೇ ಅವರು ಕಂಡುಹಿಡಿದ ಈ ತಂತ್ರಜ್ಞಾನ ವಿಶ್ವದ ಸಂವಹನ ವ್ಯವಸ್ಥೆಯನ್ನೇ  ಬದಲಿಸಿದೆ’ ಎಂದು ಅವರು ಕೆಲಸ ಮಾಡುತ್ತಿದ್ದ ರೇಥನ್‌ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
ರೇ ಅವರ ನಿಧನಕ್ಕೆ ಆನ್‌ಲೈನ್‌ ಜಗತ್ತು ಕಂಬನಿ ಮಿಡಿದಿದೆ.

ಇಂಟರ್‌ನೆಟ್‌ ಪಿತಾಮಹರಲ್ಲಿ ಒಬ್ಬರಾದ  ವಿಂಟ್‌ ಸರ್ಫ್‌ ಅವರು ರೇ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಅತಿ ದುಃಖದ ಸುದ್ದಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.