ಕೈರೊ (ಪಿಟಿಐ): ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ಉತ್ತರಾಧಿಕಾರಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮತದಾರರು ನಿರಾಸಕ್ತಿ ತೋರಿಸಿದ್ದು ಅತಿ ಕಡಿಮೆ ಮತದಾನ ನಡೆದಿದೆ.
ಅಧ್ಯಕ್ಷರ ಚುನಾವಣೆಯ ಮೊದಲ ದಿನ ಕೇವಲ ಶೇ 20 ರಷ್ಟು ಮತದಾನವಾಗಿದ್ದರೆ ಎರಡನೆಯ ದಿನ ಮತಗಟ್ಟೆಗಳ ಮುಂದೆ ಮತದಾರರ ಸಾಲು ಕಂಡುಬರಲಿಲ್ಲ.
`ಮುಸ್ಲಿಮ್ ಬ್ರದರ್‌ಹುಡ್~ನ ಅಭ್ಯರ್ಥಿ ಮಹಮ್ಮದ್ ಮೊರ್ಸಿ ಇಲ್ಲವೆ ಮುಬಾರಕ್ ಅವಧಿಯಲ್ಲಿ ಪ್ರಧಾನಿಯಾಗಿದ್ದ, ಸೇನಾ ಬೆಂಬಲದಿಂದ ಕಣದಲ್ಲಿರುವ ಅಹ್ಮದ್ ಷಫೀಕ್- ಈ ಇಬ್ಬರಲ್ಲಿ ಒಬ್ಬರನ್ನು ಮತದಾರರು ಅಧ್ಯಕ್ಷರನ್ನಾಗಿ ಚುನಾಯಿಸಬೇಕಿದೆ. ಇದು ಮತದಾರರಿಗೆ `ಅತ್ತ ದರಿ ಇತ್ತ ಪುಲಿ~ ಎನ್ನುವಂತಾಗಿದೆ.
ಈಜಿಪ್ಟ್‌ನಲ್ಲಿ ನಡೆದ ಚುನಾವಣೆಯಲ್ಲಿ ಇದು ಮುಕ್ತ, ನ್ಯಾಯಸಮ್ಮತ ಎನ್ನಲಾಗಿದ್ದು ದೇಶದ ವಕೀಲರ ಸಂಘಟನೆಯ ಪ್ರಕಾರ ಯಾವ ಮತಗಟ್ಟೆಯಲ್ಲೂ ಮತದಾನದ ಪ್ರಮಾಣ ಶೇ 15 ದಾಟಿಲ್ಲ. ಆದರೆ ಕೆಲವು ವೀಕ್ಷಕರು ಅಭಿಪ್ರಾಯಪಟ್ಟಂತೆ ವಿಪರೀತ ಬಿಸಿಲಿನಿಂದಾಗಿ ಮತದಾನದ ಪ್ರಮಾಣ ಹೆಚ್ಚಾಗಿಲ್ಲ. ಇದೇ ಕಾರಣಕ್ಕೆ ಮತದಾನದ ಅವಧಿಯನ್ನು ರಾತ್ರಿ 9ರತನಕ ವಿಸ್ತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.