ADVERTISEMENT

ಈಜಿಪ್ಟ್: ಬೆಬ್ಲೊವಿ ಸಂಪುಟ ರಚನೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST

ಕೈರೊ (ಪಿಟಿಐ): ಪ್ರತಿಭಟನೆ ತೀವ್ರಗೊಳಿಸುವುದಾಗಿ ಮುಸ್ಲಿಂ ಬ್ರದರ್‌ಹುಡ್ ಸಂಘಟನೆಯ ಕಾರ್ಯಕರ್ತರು ಘೋಷಿಸಿದ್ದು, ಈ ಬೆಳವಣಿಗೆ ಈಜಿಪ್ಟ್‌ನ ನೂತನ ಪ್ರಧಾನಿ ಹಾಜಿಮ್ ಎಲ್-ಬೆಬ್ಲೊವಿ ಅವರು ಸಂಪುಟ ರಚಿಸಲು ಅಡ್ಡಿಯಾಗಿದೆ.

ಸಂಪುಟ ರಚನೆಗೆ ಯಾವುದೇ ಅಡ್ಡಿ ಎದುರಾಗಿಲ್ಲ ಎಂದು ಪ್ರಧಾನಿ ಹಾಜಿಮ್ ಹೇಳಿದ್ದರೂ, ಕೆಲವು ರಾಜಕೀಯ ಮುಖಂಡರು ಸಚಿವ ಸ್ಥಾನ ವಹಿಸಿಕೊಳ್ಳಲು ಒಪ್ಪುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.