ADVERTISEMENT

ಈಜಿಪ್ಟ್: ಹಿಂಸಾಚಾರಕ್ಕೆ 30 ಬಲಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 11:34 IST
Last Updated 6 ಜುಲೈ 2013, 11:34 IST
ಮೊರ್ಸಿ ಬೆಂಬಲಿಗರು ಶುಕ್ರವಾರ ಪ್ರತಿಭಟನೆ ನಡೆಸಿದ ಕ್ಷಣ. -ಎಎಫ್‌ಪಿ ಚಿತ್ರ.
ಮೊರ್ಸಿ ಬೆಂಬಲಿಗರು ಶುಕ್ರವಾರ ಪ್ರತಿಭಟನೆ ನಡೆಸಿದ ಕ್ಷಣ. -ಎಎಫ್‌ಪಿ ಚಿತ್ರ.   

ಕೈರೊ (ಪಿಟಿಐ): ಕ್ಷಿಪ್ರ ಸೇನಾಕ್ರಾಂತ್ರಿಯಲ್ಲಿ ಪದಚ್ಯುತಿಗೊಂಡಿರುವ ಈಜಿಪ್ಟ್ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಅವರನ್ನು ಬೆಂಬಲಿಸಿ ಮುಸ್ಲಿಂ ಬ್ರದರ್‌ಹುಡ್ ನೇತೃತ್ವದ ಮೈತ್ರಿಕೂಟದ ಸದ್ಯಸರು ರಾಷ್ಟ್ರದಾದ್ಯಂತ ನಡೆಸುತ್ತಿರುವ ಸಾಮೂಹಿಕ ಪ್ರತಿಭಟನೆಯ ವೇಳೆ ಉಂಟಾದ ಹಿಂಸಾಚಾರದಲ್ಲಿ ಶನಿವಾರ ಕನಿಷ್ಠ 30 ಜನ ಮೃತಪಟ್ಟು 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ನಂತರ ಸಾವಿರಾರು ಸಂಖ್ಯೆಯಲ್ಲಿ ಬಿದಿಗಿಳಿದ ಮೊರ್ಸಿ ಅವರ ಬೆಂಬಲಿಗರು ಆಕ್ರೋಶಭರಿತರಾಗಿ `ಸೇನಾಡಳಿತ ಕೆಳಕ್ಕಿಳಿಯಲಿ' ಎಂದು ಘೋಷಣೆ ಕೂಗುತ್ತ ಪ್ರತಿಭಟನೆಗೆ ಮುಂದಾದರು. ಈ ವೇಳೆ ಮೊರ್ಸಿ ಪರ ಹಾಗೂ ವಿರೋಧಿಗಳ ಮಧ್ಯೆ ಉಂಟಾದ ಘರ್ಷಣೆಯಲ್ಲಿ ಈ ಪ್ರಾಣಹಾನಿ ಸಂಭವಿಸುತ್ತಿವೆ.

ಸೇನಾಡಳಿತವನ್ನು ವಿಸರ್ಜಿಸಿ ಪುನಃ ಮೊರ್ಸಿ ಅವರನ್ನು ಅಧ್ಯಕ್ಷ ಪದವಿಯಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ದೇಶದಾದ್ಯಂತ ಮೊರ್ಸಿ ಬೆಂಬಲಿಗರು ಬಿದಿಗಿಳಿದು ನಡೆಸುತ್ತಿರುವ ಪ್ರತಿಭಟನೆ ಕಾವು ಪಡೆದಿದ್ದು, ಇದನ್ನು ವಿರೋಧಿಸಿ ಮೊರ್ಸಿ ವಿರೋಧಿಗಳು ಕೂಡ ಪ್ರತಿಭಟನೆಗಳನ್ನು ನಡೆಸುತ್ತಿರುವುದರಿಂದ ಅರಬ್ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಈಜಿಪ್ಟ್‌ನಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಳ್ಳುವ ಭೀತಿಯನ್ನು ಸೃಷ್ಟಿಸಿದೆ.

ಈ ಮಧ್ಯೆ, ಈಜಿಪ್ಟ್ ಸೇನೆಯು ಮುಸ್ಲಿಂ ಬ್ರದರ್‌ಹುಡ್‌ನ ಉನ್ನತ ನಾಯಕರ ಬಂಧನಕ್ಕಾಗಿ ಶೋಧ ಮುಂದುವರಿಸಿದೆ. ಹಾಗಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ತಲೆ ದೋರಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.