ADVERTISEMENT

ಉ.ಕೊರಿಯಾ ವಿಶ್ವಕ್ಕೆ ಭೀತಿ ಒಡ್ಡಿದೆ: ಜಾನ್‌ ಕೆರಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2016, 10:08 IST
Last Updated 27 ಜನವರಿ 2016, 10:08 IST
ಜಂಟಿ ಸುದ್ದಿಗೋಷ್ಠಿಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ -ರಾಯಿಟರ್ಸ್ ಚಿತ್ರ
ಜಂಟಿ ಸುದ್ದಿಗೋಷ್ಠಿಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ -ರಾಯಿಟರ್ಸ್ ಚಿತ್ರ   

ಬೀಜಿಂಗ್‌ (ಎಎಫ್‌ಪಿ): ಅಣ್ವಸ್ತ್ರ ಸಜ್ಜಿತ ರಾಷ್ಟ್ರ ಉತ್ತರ ಕೊರಿಯಾ ‘ಜಗತ್ತಿಗೆ ಎದುರಾಗಿರುವ ಪ್ರತ್ಯಕ್ಷ್ಯ, ಘೋಷಿತ ಬೆದರಿಕೆ’ಯಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು ತಿಳಿಸಿದ್ದಾರೆ.

ಉತ್ತರ ಕೊರಿಯಾ ನಡೆಸಿದ ನಾಲ್ಕನೇ ಅಣ್ವಸ್ತ್ರ ಪರೀಕ್ಷೆಯ ಕುರಿತು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ ಚರ್ಚಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಸ್ವದೇಶ ಹಾಗೂ ಸ್ನೇಹಿತರನ್ನು ಮತ್ತು ಮೈತ್ರಿ ರಾಷ್ಟ್ರಗಳ ರಕ್ಷಣೆಗಾಗಿ ಅಮೆರಿಕವು ಅಗತ್ಯ ಇರುವ ಎಲ್ಲವನ್ನೂ ಅಮೆರಿಕ ಮಾಡಲಿದೆ’ ಎಂದು ವಾಂಗ್ ಜತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆರಿ ನುಡಿದರು.

ADVERTISEMENT

ಜನವರಿ 6ರಂದು ಉತ್ತರ ಕೊರಿಯಾ ‘ಜಲಜನಕ ಬಾಂಬ್’ ಸ್ಪೋಟ ಪರೀಕ್ಷೆ ನಡೆಸಿತ್ತು. ಇದು ವಿಶ್ವದ ಕೆಂಗಣ್ಣಿಗೆ ಕಾರಣವಾಗುವ ಜತೆಗೆ ಅಪಾರ ಆತಂಕವನ್ನೂ ಒಡ್ಡಿತ್ತು.

ಉತ್ತರ ಕೊರಿಯಾದ ನಡೆಯನ್ನು ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಖಂಡಿಸಿದ್ದವು. ಚೀನಾ ಕೂಡ ಜಲಜನಕ ಬಾಂಬ್‌ ಪರೀಕ್ಷೆಯನ್ನು ಕಟುವಾಗಿ ಟೀಕಿಸಿತ್ತು. ಆದರೂ, ಉತ್ತರ ಕೊರಿಯಾ ಕುರಿತು ಚೀನಾ ಯಾವಾಗಲೂ ನಮ್ಯ ನೀತಿಯನ್ನೇ ಅನುಸರಿಸುತ್ತ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.