ADVERTISEMENT

ಉಗ್ರರಿಗೆ ಬೆಂಬಲ: ಮೌಲ್ವಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಜಕಾರ್ತ (ಎಪಿ): ಭಯೋತ್ಪಾದನಾ ತರಬೇತಿ ಶಿಬಿರಕ್ಕೆ ಬೆಂಬಲ ನೀಡಿದ ಆರೋಪದಲ್ಲಿ ಬಂಧಿತನಾಗಿದ್ದ ಇಂಡೋನೇಷ್ಯದ ಮೌಲ್ವಿಯೊಬ್ಬನಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.ಧಾರ್ಮಿಕ ಮುಖಂಡನಾಗಿ ಪರಿಚಿತನಾಗಿದ್ದ ಅಬು ಬಕರ್ ಬಶೀರ್ 2002ರಲ್ಲಿ 202 ಜನರ ಹತ್ಯೆಗೆ ಕಾರಣವಾದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ.

ಅಲ್ಲದೆ ಕಳೆದ ವರ್ಷ ಭಯೋತ್ಪಾದನಾ ತರಬೇತಿ ಶಿಬಿರಕ್ಕೂ ಈತ ಸಹಾಯ ಒದಗಿಸಿದ್ದ ಎಂದು ಆರೋಪಿಸಲಾಗಿತ್ತು. ಈತನ ವಿರುದ್ಧದ ಆರೋಪವನ್ನು ಸಾಬೀತು ಮಾಡಲು ಸತತ ಎಂಟು ವರ್ಷಗಳಿಂದ ಪ್ರಯತ್ನಿಸಿದ್ದ ಪ್ರಾಸಿಕ್ಯೂಟರ್ ಎರಡು ಬಾರಿ ವಿಫಲ ಯತ್ನದ ಬಳಿಕ ಸೂಕ್ತ ಪುರಾವೆ ಒದಗಿಸಿ ಶಿಕ್ಷೆಗೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಶೀರ್‌ಗೆ ಶಿಕ್ಷೆ ವಿಧಿಸಿರುವುದಕ್ಕೆ ಆತನ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.