ADVERTISEMENT

ಉಗ್ರರ ಜತೆ ಐಎಸ್‌ಐ ಸಂಪರ್ಕ: ಅಮೆರಿಕ

ಪಿಟಿಐ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST

ವಾಷಿಂಗ್ಟನ್‌ : ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಉಗ್ರಗಾಮಿ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿದೆ ಎಂದು ಅಮೆರಿಕ ಆರೋಪಿಸಿದೆ.

ವಿದೇಶಾಂಗ ಸಂಬಂಧಗಳ ಕುರಿತಾದ ಸೆನೆಟ್‌ ಸಮಿತಿಗೆ ಈ ವಿಷಯವನ್ನು ಅಮೆರಿಕ ಜಂಟಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಜೋಸೆಫ್‌ ಡನ್‌ಫೋರ್ಡ್‌ ತಿಳಿಸಿದ್ದಾರೆ.

‘ಹಲವು ವರ್ಷಗಳಿಂದ ಪಾಕಿಸ್ತಾನದ ನಡವಳಿಕೆಯನ್ನು ಬದಲಾಯಿಸಲು ಅಮೆರಿಕ ಪ್ರಯತ್ನಿಸಿದೆ. ಆದರೆ, ಐಎಸ್‌ಐ ಧೋರಣೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

ರಕ್ಷಣಾ ಕಾರ್ಯದರ್ಶಿ ಜಿಮ್‌ ಮ್ಯಾಟಿಸ್‌ ಸಹ ಐಎಸ್‌ಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಉಗ್ರರಿಗೆ ಪಾಕಿಸ್ತಾನ ಆಶ್ರಯ ನೀಡಿರುವುದು ಬಹಿರಂಗವಾಗಿದೆ. ಐಎಸ್‌ಐ ಸಹ ತನ್ನದೇ ವಿದೇಶಾಂಗ ನೀತಿಯನ್ನು ಸಹ ಹೊಂದಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.